ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ ಕಾರ್ಯಕರ್ತರೊಬ್ಬರ ಜೊತೆ ಸೇರಿ ಹೈಸ್ಕೂಲ್ ಹುಡುಗಿಯರನ್ನು ಕಾಮದ ಆಟಕ್ಕೆ ಬಳಸುತ್ತಿರುವ ವಿಷಯ ಬಹಿರಂಗವಾಗಿದೆ. ತನ್ನ ಹುಡುಗಿಯನ್ನು ಉಳಿಸಿಕೊಳ್ಳಲು ರಕ್ಷಣಾ ಕಾರ್ಯಾಚರಣೆ ನಡೆಸಿದ ಪ್ರೇಮಿಯೊಬ್ಬ ಎಲ್ಲಾ ವಿಷಯದ ಬಗ್ಗೆ ದಾಖಲೆಗಳೊಂದಿಗೆ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದು, ಸಂಚಲನ ಮೂಡಿಸಿದೆ.
ಸಿದ್ದಾಪುರದ ಸಂತೋಷ ಎಂಬಾತರು ಕಾಮಕೇಳಿ ದೃಶ್ಯಾವಳಿಗಳ `ಸ್ಟಿಂಗ್ ಆಪರೇಶನ್’ ನಡೆಸಿದ್ದಾರೆ. ಇದೇ ಕಾರಣದಿಂದ ಅವರ ಮೇಲೆ ದಾಳಿ ನಡೆದಿದ್ದು, ದಾಳಿಯ ವಿವರ ದಾಖಲಿಸಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪ್ರಕರಣದಲ್ಲಿ ವಕೀಲರೊಬ್ಬರ ಹೆಸರು ತಳಕುಹಾಕಿಕೊಂಡಿದೆ. `ಸಿದ್ದಾಪುರದಲ್ಲಿ ಒಂದು ತಂಡ ಹೈಸ್ಕೂಲು ಹುಡುಗಿಯರನ್ನು ಪ್ರೀತಿ-ಪ್ರೇಮ ಹೆಸರಿನಲ್ಲಿ ಪರಿಚಯಿಸಿಕೊಂಡು ಅವರನ್ನು ಬಳಸಿಕೊಳ್ಳುತ್ತಿದೆ ಎಂಬ ಮಾಹಿತಿ ಬಂದಿತು. ಅವರು ಯಾರು ಎಂದು ತಿಳಿದುಕೊಳ್ಳಲು ತಾನು ನಕಲಿ ಐಡಿ ಸೃಷ್ಠಿಸಿ ಹುಡುಕಾಟ ನಡೆಸಿದೆ’ ಎನ್ನುತ್ತ ಸಂತೋಷ್ ವಿವಿಧ ದಾಖಲೆಗಳ ಜೊತೆ ಧ್ವನಿ ಮುದ್ರಣದ ವಿಡಿಯೋ ಹರಿಬಿಟ್ಟಿದ್ದಾರೆ.
ಸಾವಿಗೂ ಮುನ್ನ ಹೈಸ್ಕೂಲು ಹುಡುಗಿಯರ ಜೊತೆ ನಡೆಸಿದ ಅಶ್ಲೀಲ ಸಂಭಾಷಣೆ, ಬಾಲಕಿಯರ ಬೆತ್ತಲೆ ಫೋಟೋ, ಅಪ್ರಾಪ್ತರ ಜೊತೆ ಪುರುಷನೊಬ್ಬ ಸರಸ-ಸಲ್ಲಾಪದಲ್ಲಿ ತೊಡಗಿದ ಚಿತ್ರಣದ ದಾಖಲೆಗಳೊಂದಿಗೆ ಸಂತೋಷ್ ವಿಡಿಯೋ ಮಾಡಿದ್ದಾರೆ. ಅಶ್ಲೀಲ ಸಂದೇಶ ರವಾನೆ, ದೇಹದ ಅಂಗಾoಗಗಳು ಕಾಣುವ ಚಿತ್ರಗಳ ವಿನಿಮಯ ನಡೆದದನ್ನು ಜನರ ಮುಂದಿರಿಸಿದ್ದಾರೆ. `ಈ ಸ್ಟಿಂಗ್ ಆಪರೇಶನ್ ನಡೆಸಲು ಹುಡುಗಿ ಹೆಸರಿನಲ್ಲಿ ತಾನು ಒಂದು ನಕಲಿ ಐಡಿ ಮಾಡಿದೆ. ಅದರ ಮೂಲಕವೇ ದುಷ್ಟ ತಂಡದವರನ್ನು ನಂಬಿಸಿ ದಾಖಲೆ ಸಂಗ್ರಹಿಸಿದೆ. ಇನ್ನೂ ಅನೇಕ ಹುಡುಗಿಯರ ಅಶ್ಲೀಲ ವಿಡಿಯೋಗಳಿದ್ದು, ನಾನು ಹುಡುಗಿ ಅಲ್ಲ ಎಂದು ಗೊತ್ತಾದಾಗ ಕೆಲವರು ನನ್ನನ್ನು ಹಿಂಬಾಲಿಸಿ ಹಲ್ಲೆ ಮಾಡಿದ್ದಾರೆ. ನನ್ನ ಟಾಬ್ ಸಹ ಕದ್ದಿದ್ದಾರೆ’ ಎಂದು ಸಂತೋಷ್ ಸಾವಿಗೂ ಮುನ್ನ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.
`ಹುಡುಗಿಯರಿಂದ ಅಶ್ಲೀಲ ಫೋಟೋ ತರಿಸಿಕೊಂಡು ಅದನ್ನು ಈ ತಂಡದವರು ಬೇರೆ ಬೇರೆ ಕಡೆ ಹಂಚುತ್ತಾರೆ. ನಾನು ಒಬ್ಬ ಹುಡುಗಿಗಾಗಿ ಈ ಆಪರೇಶನ್ ನಡೆಸಿದ್ದು, ಆ ಹುಡುಗಿ ಸಹ ಇದೀಗ ಆ ತಂಡದವರ ಬೆಂಬಲಕ್ಕೆ ಇದ್ದಾರೆ. ಪ್ರೀತಿಸುವುದಾಗಿ ನಂಬಿಸಿ ಹುಡುಗಿಯರನ್ನು ಕಾಮದ ಆಸೆಗೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಅವರು ವಿಡಿಯೋದಲ್ಲಿ ವಿವರಿಸಿದ್ದಾರೆ. `ಹುಡುಗಿಯ ಜೀವನ ಹಾಳಾಗಬಾರದು ಎಂದು ಈ ಕೆಲಸ ಶುರು ಮಾಡಿದ್ದೆ. ಆದರೆ, ಆ ನಂತರ ನನ್ನ ಗುರಿ ಬದಲಾಗಿದ್ದು, ಆ ಕಾಮುಕರಿಂದ ಹಣ ಪಡೆದಿದ್ದೇನೆ. ನಕಲಿ ಐಡಿ ಮಾಡಿದ್ದು ಹಾಗೂ ಹಣ ಪಡೆದಿದ್ದು ನನ್ನ ತಪ್ಪು ಎಂದು ಅರಿವಾಗಿದೆ’ ಎಂದು ಸಂತೋಷ್ ಪಶ್ಚಾತಾಪದ ಮಾತುಗಳನ್ನು ಆಡಿದ್ದಾರೆ. `ನನಗೆ ಯಾರ ಬೆಂಬಲವೂ ಸಿಕ್ಕಿಲ್ಲ. ವಿಡಿಯೋ ಯಾರಿಗೆ ಕೊಡಬೇಕು ಎಂದು ಗೊತ್ತಾಗಲಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ. ಕೊನೆಗೆ `ತನಗೆ ಬದುಕುವ ಆಸೆ ಇಲ್ಲ’ ಎಂದ ಅವರು ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡರೊಬ್ಬರೊಬ್ಬರು ಈ ತಂಡದಲ್ಲಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಬಿಜೆಪಿಯಿಂದ ಹೋರಾಟ:
`ಸಿದ್ದಾಪುರ ಪೊಲೀಸರ ಮೇಲೆ ನಮಗೆ ವಿಶ್ವಾಸವಿಲ್ಲ. ಈ ಘಟನಾವಳಿಗಳ ಕುರಿತು ಪ್ರತ್ಯೇಕ ಪ್ರಕರಣ ದಾಖಲಿಸಬೇಕು’ ಎಂದು ಬಿಜೆಪಿ ಆಗ್ರಹಿಸಿದೆ. ಸಂತೋಷ್ ಆತ್ಮಹತ್ಯೆ ವಿಷಯವಾಗಿ ಹೊರಗಿನ ತನಿಖಾ ಅಧಿಕಾರಿಗಳನ್ನು ನೇಮಿಸಬೇಕು. ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ಹಾಗೂ ವಕೀಲ ಎಂ ಎನ್ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಕೆ ಜಿ ನಾಯ್ಕ್ ಹಣಜಿಬೈಲ್ ಆಗ್ರಹಿಸಿದ್ದಾರೆ. `ಕಾಂಗ್ರೆಸ್ ಮುಖಂಡರ ಒತ್ತಡದಿಂದ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದೆ. ಸಣ್ಣ ವಯಸ್ಸಿನಲ್ಲಿಯೇ ಬಾಲಕಿಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದನ್ನು ತಡೆಯಬೇಕು’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಒತ್ತಾಯಿಸಿದ್ದಾರೆ. ಕಾನೂನು ಕ್ರಮ ಆಗದೇ ಇದ್ದರೆ ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.
ಗಮನಿಸಿ: ಆತ್ಮಹತ್ಯೆಗೂ ಮುನ್ನ ಸಂತೋಷ್ ಮಾಡಿದ ವಿಡಿಯೋದಲ್ಲಿ ಅಶ್ಲೀಲ ಸಂದೇಶ, ಚಿತ್ರಗಳಿರುವ ಕಾರಣ ನಾವು ಅದನ್ನು ಪ್ರಸಾರ ಮಾಡುತ್ತಿಲ್ಲ