ಕಾರವಾರ ಕಡಲತೀರಕ್ಕೆ ದೈತ್ಯ ಆಕಾರಡ ಡಾಲ್ಪಿನ್ ಶವ ಕೊಚ್ಚಿ ಬಂದಿದೆ. ಆ ಡಾಲ್ಪಿನ್ ಹೊಟ್ಟೆಯೊಳಗೆ ಅಪಾರ ಪ್ರಮಾಣದಲ್ಲಿ ಪ್ಲಾಸ್ಟಿಕ್ ಹಾಗೂ ಮೀನಿನ ಬಲೆ ಕಾಣಿಸಿದೆ.
ಬುಧವಾರ ಕಡಲತೀರಕ್ಕೆ ಹೋದವರಿಗೆ ಗಬ್ಬು ವಾಸನೆ ಬಂದಿದ್ದು, ಅಲ್ಲಿ ಸಂಚಾರ ನಡೆಸಿದಾಗ ಡಾಲ್ಪಿನ್ ಕಳೆಬರಹ ಪತ್ತೆಯಾಗಿದೆ. ವಾಯು ವಿಹಾರಿಗಳು ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ರಿಫ್ ವಾಚ್ ಮೈರೆನ್ ಕನ್ವರ್ಶನ್ ಸಂಸ್ಥೆಯ ಸಿಬ್ಬಂದಿ ಡಾಲ್ಪನ್ ಹೊಟ್ಟೆ ಕೊಯ್ದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಆಗ, ಡಾಲ್ಪಿನ್ ಹೊಟ್ಟೆಯ ಒಳಗೆ ಪ್ಲಾಸ್ಟಿಕ್ ಕಸ ಕಾಣಿಸಿದೆ. ಮೀನಿನ ಬಲೆ ಸಹ ಅಲ್ಲಲ್ಲಿ ಸುತ್ತಿಕೊಂಡಿರುವುದು ಪತ್ತೆಯಾಗಿದೆ. ಕೆಲ ದಿನಗಳ ಹಿಂದೆಯೇ ಡಾಲ್ಪನ್ ಸಾವನಪ್ಪಿದ್ದು, ಅಲೆಗಳ ಅಬ್ಬರಕ್ಕೆ ಅದರ ಶವ ದಡಕ್ಕೆ ಬಂದಿದೆ. ಜೀರ್ಣಿಸಲಾಗದ ವಸ್ತುಗಳು ಹೊಟ್ಟೆಗೆ ಹೋಗಿರುವುದೇ ಸಾಗರಜೀವಿಯ ಸಾವಿಗೆ ಮುಖ್ಯ ಕಾರಣವಾಗಿದೆ.
ಕೆಲ ವಿದ್ಯಾರ್ಥಿಗಳು ಆಗಮಿಸಿ ಡಾಲ್ಪಿನ್ ಕುರಿತು ಅಧ್ಯಯನ ನಡೆಸಿದರು. ಮರಣೋತ್ತರ ಪರೀಕ್ಷೆ ಮುಗಿದ ನಂತರ ಕಡಲತೀರದಲ್ಲಿಯೇ ಡಾಲ್ಪಿನ್ ಶವ ಹೂಳಲಾಯಿತು.