ಹೊನ್ನಾವರದ ಈಶ್ವರ ಉಪ್ಪಾರ್ ಹಾಗೂ ರಾಜು ಉಪ್ಪಾರ್ ನಡುವೆ ನಡೆದ ಜಗಳ ನೋಡಲಾಗದೇ ಈಶ್ವರ್ ಉಪ್ಪಾರ್ ಅವರ ಪತ್ನಿ ಭಾಗ್ಯ ಉಪ್ಪಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕುಮಟಾ ತಾಲೂಕಿನ ಕಾಗಲ ಮಾನೀರದಲ್ಲಿ ಭಾಗ್ಯ ಉಪ್ಪಾರ್ ಹಾಗೂ ಲಕ್ಷಿ ಉಪ್ಪಾರ್ ಎಂಬ ಸಹೋದರಿಯರಿದ್ದರು. 15 ವರ್ಷಗಳ ಹಿಂದೆ ಲಕ್ಷಿ ಉಪ್ಪಾರ್ ಅವರು ಹೊನ್ನಾವರ ಚಂದ್ರಾಣಿಯಲ್ಲಿರುವ ರಾಜು ಉಪ್ಪಾರ್ ಅವರನ್ನು ಮದುವೆ ಆಗಿದ್ದರು. ಭಾಗ್ಯ ಉಪ್ಪಾರ್ ಅವರು ಈಶ್ವರ್ ಉಪ್ಪಾರ್ ಅವರನ್ನು ವರಿಸಿದ್ದರು. ಎರಡು ಅಕ್ಕಂದಿರು ಒಂದೇ ಮನೆ ಸೇರಿದ ಕಾರಣ ಸಹೋದರ ಮಂಜುನಾಥ ಉಪ್ಪಾರ್ ಸಂತೋಷದಿoದ ಇದ್ದರು.
ಈಚೆಗೆ ಈಶ್ವರ ಉಪ್ಪಾರ್ ಹಾಗೂ ರಾಜು ಉಪ್ಪಾರ್ ನಡುವೆ ವೈಮನಸ್ಸು ಮೂಡಿತ್ತು. ಅವರಿಬ್ಬರ ನಡುವೆ ಜಗಳ ಸಾಮಾನ್ಯವಾಗಿತ್ತು. ಬೋಟಿಯಲ್ಲಿ ಕೆಲಸ ಮಾಡಿಕೊಂಡಿದ್ದ ಈಶ್ವರ್ ಉಪ್ಪಾರ್ ಅಣ್ಣ ಸಹೋದರನ ವಿರುದ್ಧ ಮುನಿಸಿಕೊಂಡಿದ್ದರು. ಜೂನ್ 10ರಂದು ಅಣ್ಣ ತಮ್ಮನ ನಡುವೆ ಜಗಳ ಶುರುವಾಗಿದ್ದು, ಈಶ್ವರ ಉಪ್ಪಾರ್ ಅವರ ಪತ್ನಿ ಭಾಗ್ಯ ಉಪ್ಪಾರ್ ಜಗಳ ಬಿಡಿಸುವ ಪ್ರಯತ್ನ ಮಾಡಿದ್ದರು.
ಜಗಳ ಹೆಚ್ಚಾದ ಕಾರಣ ಭಾಗ್ಯ ಉಪ್ಪಾರ್ ಸಹ ಸಿಟ್ಟಾದರು. ನೇರವಾಗಿ ಮನೆ ಒಳಗೆ ಹೋಗಿ ಅವರು ಚಿಲಕ ಹಾಕಿಕೊಂಡರು. ಅಲ್ಲಿ ಅವರು ನೇಣು ಹಾಕಿಕೊಂಡಿದ್ದು, ಭಾಗ್ಯ ಉಪ್ಪಾರ್ ಅವರ ಅವಸರ ನೋಡಿದ ಮನೆಯವರು ಹಂಚು ತೆಗೆದು ಒಳಗೆ ಇಣುಕಿದರು. ನೇತಾಡುತ್ತಿದ್ದ ಭಾಗ್ಯ ಅವರನ್ನು ಉಳಿಸಲು ಕೋಣೆಯ ಬಾಗಿಲು ಒಡೆದರು.
ಆಂಬುಲೆನ್ಸ ಮೂಲಕ ಅವರನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಈ ವೇಳೆ ಹೊನ್ನಾವರದ ಉದ್ಯಮನಗರದಲ್ಲಿ ಮಂಜುನಾಥ ಉಪ್ಪಾರ್ ಗಾರೆ ಕೆಲಸ ಮಾಡುತ್ತಿದ್ದು, ಅವರಿಗೆ ಸ್ನೇಹಿತ ಸೀತಾರಾಮ ಉಪ್ಪಾರ್ ಅವರ ಫೋನ್ ಬಂದಿತು. ಅಕ್ಕನ ಆತ್ಮಹತ್ಯೆ ನಿರ್ಧಾರ ತಿಳಿದು ಮಂಜುನಾಥ ಉಪ್ಪಾರ್ ಸಹ ಆಸ್ಪತ್ರೆಗೆ ಓಡಿದರು. ಆದರೆ, ಅಷ್ಟರ ಒಳಗೆ ಭಾಗ್ಯ ಉಪ್ಪಾರ್ ಸಾವನಪ್ಪಿದ್ದರು. ಅಕ್ಕನ ಸಾವಿನ ಬಗ್ಗೆ ವಿವರಪಡೆದು ಅವರು ಪೊಲೀಸ್ ಪ್ರಕರಣ ದಾಖಲಿಸಿದರು.
ಬಾವಿಗೆ ಹಾರಿದ ವೃದ್ಧ ವ್ಯಸನಿ
ಹೊನ್ನಾವರ ರಾಮತೀರ್ಥ ಬಳಿಯ ನರಸಿಂಹ ಬಲಿಮನೆ (73) ಅವರು ಬಾವಿಗೆ ಹಾರಿ ಪ್ರಾಣ ಬಿಟ್ಟಿದ್ದಾರೆ. ಮದ್ಯ ವ್ಯಸನಿಯಾಗಿದ್ದ ಅವರು ಜೀವನದಲ್ಲಿ ಜಿಗುಪ್ಸೆ ಹೊಂದಿದ್ದರು. ಜೂ 8ರಂದು ಮನೆಯಿಂದ ಕಾಣೆಯಾಗಿದ್ದು, ಜೂ 10ರಂದು ಅವರ ಶವ ಮನೆ ಹಿಂದಿನ ಬಾವಿಯಲ್ಲಿ ಸಿಕ್ಕಿದೆ. ಅವರ ಮಗ ಅನಿಲ ಬಲಿಮನೆ ಪೊಲೀಸ್ ಪ್ರಕರಣ ದಾಖಲಿಸಿದ್ದಾರೆ.