ಶಿರಸಿ ಕ್ಷೇತ್ರದ ಶಾಸಕ ಭೀಮಣ್ಣ ನಾಯ್ಕ `ಸುಳ್ಳುಗಾರ ಶಾಸಕ’ ಎಂದು ಈ ಹಿಂದೆ ಅನಂತಮೂರ್ತಿ ಹೆಗಡೆ ಹೇಳಿದ್ದರು. ಇದೀಗ ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಗೌಡ ಅವರು `ಕ್ಷೇತ್ರದ ಜನರೇ ಸುಳ್ಳುಗಾರರರು ಎಂದಿರುವ ಬಗ್ಗೆ ಅದೇ ಅನಂತಮೂರ್ತಿ ಹೆಗಡೆ ದೂರಿದ್ದಾರೆ.
`ಶಿರಸಿ ಕ್ಷೇತ್ರದ ಜನರೇ ಸುಳ್ಳುಗಾರರು ಎಂದು ಹೇಳುವ ಮೂಲಕ ಶಿರಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ್ ಗೌಡ್ರು ಜನರಿಗೆ ಅವಮಾನ ಮಾಡುತ್ತಿದ್ದಾರೆ’ ಎಂದು ಅನಂತಮೂರ್ತಿ ಹೆಗಡೆ ಸುದ್ದಿಗಾರರ ಬಳಿ ದೂರಿದರು. `ಜಗದೀಶ ಗೌಡ ಅವರು ಕ್ಷಮೆ ಕೇಳಬೇಕು’ ಎಂದು ಒತ್ತಾಯಿಸಿದರು. `ಪರಿಶಿಷ್ಟ ಸಮುದಾಯ, ಸಿದ್ದಿ ಜನಾಂಗದ ಜನ ನಮಗೆ ರಸ್ತೆ ಬೇಕು ಎಂದು ಕೇಳಿದರೆ ಜಗದೀಶ ಗೌಡ ಅವರು ಅಸಹ್ಯ ಎನ್ನುತ್ತಾರೆ. ಅವರ ಆ ಮಾತು ಆ ಜನಾಂಗಕ್ಕೆ ಮಾಡಿದ ಜಾತಿ ನಿಂದನೆ ಅಲ್ಲವೇ?’ ಎಂದು ಅನಂತಮೂರ್ತಿ ಹೆಗಡೆ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ಆರ್ ವಿ ದೇಶಪಾಂಡೆ ಅವರೇ ಐದು ಬಾರಿ ಉಸ್ತುವಾರಿ ಸಚಿವರಾಗಿದ್ದರು. ಅವರು ಯಾಕೆ ರಸ್ತೆಯನ್ನು ಅಭಿವೃದ್ಧಿಪಡಿಸಲಿಲ್ಲ? ಆಗ ಕಾಂಗ್ರೆಸ್ ಸರ್ಕಾರ ಇದ್ದರೂ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದ ಭೀಮಣ್ಣ ನಾಯ್ಕ ಅವರು ಕೆಲಸ ಮಾಡಿಲ. 30 ವರ್ಷದ ಹಿಂದಿನ ಕಥೆ ಹೇಳುವ ಅವರು ಈಗಲೂ ಕೆಲಸ ಮಾಡುತ್ತಿಲ್ಲ’ ಎಂದು ದೂರಿದರು.
ಮತ್ತೀಘಟ್ಟ ಗ್ರಾಮಸ್ಥರಾದ ನಾರಾಯಣ ಹೆಗಡೆ, ದಾಮೋದರ ಸಿದ್ದಿ, ಗಣಪತಿ ನಾಯ್ಕ, ವಿನಯ ಹೆಗಡೆ, ಹಾಲಪ್ಪ ಜಕ್ಕಣ್ಣನವರ್, ನಾಗೇಶ ಸಿದ್ದಿ, ರೇಣುಕಾ ಸಿದ್ದಿ, ನಾಗರಾಜ ಹೆಗಡೆ ಇನ್ನಿತರರು ಇದ್ದರು.