`ಸರಾಯಿ ಸೇವಿಸುವುದು ಒಳ್ಳೆಯದಲ್ಲ’ ಎಂದು ಕುಟುಂಬದವರು ಬುದ್ದಿ ಹೇಳಿದ ಕಾರಣ ಸಿದ್ದಾಪುರದ ಈಶ್ವರ ನಾಯ್ಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಸಿದ್ದಾಪುರದ ಹೇರೂರಿನ ಸಾಕಟ್ಟನಗುಂಡಿಯಲ್ಲಿ ಈಶ್ವರ ನಾಯ್ಕ (52) ವಾಸವಾಗಿದ್ದರು. ದಿನದ ದುಡಿಮೆಯನ್ನು ಅವರು ವ್ಯಸನಕ್ಕೆ ಬಳಸುತ್ತಿದ್ದರು. ಮನೆಯವರು ಇದನ್ನು ವಿರೋಧಿಸಿದ ಕಾರಣ ಜಗಳವಾಗುತ್ತಿತ್ತು.
ಕುಡಿತ ಬೇಡ ಎಂದು ಕುಟುಂಬದವರು ಹೇಳಿದ ಕಾರಣ ಬೇಸರಗೊಂಡ ಈಶ್ವರ ನಾಯ್ಕ ಅವರು ಈ ದಿನ ಮನೆ ಹತ್ತಿರದ ಗೇರು ಮರ ಹತ್ತಿದರು. ಅಲ್ಲಿ ಹಗ್ಗದಿಂದ ಕುತ್ತಿಗೆ ಬಿಗಿದುಕೊಂಡು ಸಾವಿಗೆ ಶರಣಾದರು.
ಪೊಲೀಸರಿಗೆ ನಿಂದನೆ: ದೂರು
ಹಳಿಯಾಳದ ಮುರ್ಕವಾಡ ಗ್ರಾಮದಲ್ಲಿ ನಡೆದ ಗಲಾಟೆ ತಪ್ಪಿಸಲು ತೆರಳಿದ ಪೊಲೀಸ್ ಸಿಬ್ಬಂದಿ ಮೇಲೆ ಕೂಗಾಡಿದ ವ್ಯಕ್ತಿ ವಿರುದ್ಧ ದೂರು ದಾಖಲಾಗಿದೆ.
ಜಗಳ ತಪ್ಪಿಸಲು ಹೋದ ಪೊಲೀಸ್ ಸಿಬ್ಬಂದಿ ಕಾಶೀನಾಥ್ ಅವರ ಮೇಲೆ ದಿಲಾವರ್ ಎಂಬಾತರು ಕೈ ಎತ್ತಿದ್ದಾರೆ. ಜಾತಿ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದಾರೆ. ಏರು ಧ್ವನಿಯಲ್ಲಿ ಕೂಗಾಡಿ ದೂಕಿದ್ದಾರೆ. ಈ ಹಿನ್ನಲೆ ಪೊಲೀಸ್ ಸಿಬ್ಬಂದಿ ದೂರು ನೀಡಿದ್ದಾರೆ.
ಸ್ಮಶಾನಕ್ಕೆ ತೆರಳಿ ಶವವಾದ ಕಾರ್ಮಿಕ
ಮುಂಡಗೋಡ ಬಸವರಾಜ ಮುದಿನಕೊಪ್ಪ ಅವರು ಸ್ಮಶಾನದಲ್ಲಿಯೇ ಶವವಾಗಿದ್ದಾರೆ. ಇಂದೂರಿನ ಬಸವರಾಜ ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಈಚೆಗೆ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಅದಾಗಿಯೂ ಅವರು ಊಟ ಮಾಡುತ್ತಿರಲಿಲ್ಲ. ಸ್ಮಶಾನಕ್ಕೆ ತೆರಳಿ ಕದ್ದು-ಮುಚ್ಚಿ ಸರಾಯಿ ಕುಡಿಯುತ್ತಿದ್ದರು.
ಜೂನ್ 10ರಂದು ಮನೆಯಿಂದ ಹೊರಟ ಅವರು ಎಂದಿನ0ತೆ ಸ್ಮಶಾನದ ಕಡೆ ಹೊರಟಿದ್ದರು. ರಾತ್ರಿ ಮನೆಗೆ ಬಂದಿರಲಿಲ್ಲ. ಸರಾಯಿ ಕುಡಿದು ಸ್ಮಶಾನದ ಕಟ್ಟೆಯ ಮೇಲೆ ಮಲಗಿದ್ದ ಅವರು ಅಲ್ಲಿಯೇ ಸಾವನಪ್ಪಿದರು. ಜೂ 11ರಂದು ಅವರು ಸಾವು ಖಚಿತವಾಯಿತು. ಬಸವರಾಜ ಅವರ ಪುತ್ರ ನಾಗರಾಜ್ ಮುದಿನಕೊಪ್ಪ ಅವರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ, ಪ್ರಕರಣ ದಾಖಲಿಸಿದ್ದಾರೆ.