ಸಾರ್ವಜನಿಕ ಪ್ರದೇಶದಲ್ಲಿ ಅನಗತ್ಯ ಹೊಡೆದಾಟ-ಗಲಾಟೆ ಮಾಡುತ್ತಿದ್ದ ನಾಲ್ವರನ್ನು ಭಟ್ಕಳ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ವಿಚಾರಣೆ ವೇಳೆಯೂ ಗೊಂದಲ ಸೃಷ್ಠಿಸಿದ ಕಾರಣ ಪಿಎಸ್‌ಐ ನವೀನ ನಾಯ್ಕ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.
ಜೂನ್ 10ರ ಸಂಜೆ ಭಟ್ಕಳದ ರಾಷ್ಟಿಯ ಹೆದ್ದಾರಿ ಬಳಿಯ ಜತಾರ್ ರೆಸ್ಟೋರೆಂಟ್ ಮುಂದೆ ಗಲಾಟೆ ನಡೆಯುತ್ತಿತ್ತು. ಇದನ್ನು ನೋಡಿದ ಜನ ಪೊಲೀಸರಿಗೆ ಮಾಹಿತಿ ನೀಡಿದರು. ಮುಗ್ದುಂ ಕಾಲೋನಿಯ ವ್ಯಾಪಾರಿ ಮಹ್ಮದ್ ಇಮ್ರಾನ್, ಅದೇ ಪ್ರದೇಶದಲ್ಲಿ ಎಲೆಕ್ಟಾçನಿಕ್ ಕೆಲಸ ಮಾಡುವ ಅಬು ತಾಹಿರ್ ಸೇರಿ ಹೊನ್ನಾವರ ಕರ್ಕಿಯ ಗುತ್ತಿಗೆದಾರ ಮಹಮದ್ ಅಲ್ತಾಪ್ ಹಾಗೂ ಅದೇ ಊರಿನ ಮತ್ತೊಬ್ಬ ಗುತ್ತಿಗೆದಾರ ಅಲ್ತಾಪ ಅಬ್ದುಲ್ ಜೊತೆ ಜಗಳವಾಡುತ್ತಿದ್ದರು.
ಆ ನಾಲ್ವರ ನಡುವೆ ನಡೆದ ಜಗಳ ಹೊಡೆದಾಟದ ಸ್ವರೂಪಕ್ಕೆ ತಿರುಗಿದ್ದು, ಆ ಎಲ್ಲರೂ ಪರಸ್ಪರ ಗಾಯಗೊಂಡಿದ್ದರು. ಪೊಲೀಸರು ಅಲ್ಲಿಗೆ ಆಗಮಿಸಿ ಎಲ್ಲರನ್ನು ವಿಚಾರಣೆಗೆ ಒಳಪಡಿಸಿದರು. ಆಗ, ಯಾರೊಬ್ಬರೂ ಸತ್ಯ ಹೇಳಲಿಲ್ಲ. ಹೀಗಾಗಿ ಹೊಡೆದಾಟದ ಕಾರಣವೂ ಗೊತ್ತಾಗಲಿಲ್ಲ. ಅವರ ಹೊಡೆದಾಟದಿಂದ ಸಾರ್ವಜನಿಕರು ಸಮಸ್ಯೆ ಅನುಭವಿಸಿದ್ದು, ಭಟ್ಕಳ ಪಿಎಸ್‌ಐ ನವೀನ ನಾಯ್ಕ ಆ ನಾಲ್ವರ ವಿರುದ್ಧವೂ ಪ್ರಕರಣ ದಾಖಲಿಸಿದರು.