ಮಹಿಳೆಯೊಬ್ಬರಿಗೆ ದೊಡ್ಡ ಪ್ರಮಾಣದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿ ನಕಲಿ ನೋಟು ನೀಡಿದ ವಂಚಕನನ್ನು ಹುಬ್ಬಳ್ಳಿ-ಧಾರವಾಡ ಪೊಲೀಸರು ಭಟ್ಕಳದಲ್ಲಿ ಬಂಧಿಸಿದ್ದಾರೆ. ಮುರುಡೇಶ್ವರದಲ್ಲಿ ಅಡಗಿದ್ದ ಮೈಸೂರಿನ ಮೊಹಮ್ಮದ್ ಆಸಿಫ್ ವಿಚಾರಣೆ ಮುಂದುವರೆದಿದ್ದು, ಆತನ ಮೂಲಕ ನಕಲಿ ನೋಟಿನ ಜಾಲ ಜಿಲ್ಲೆಗೂ ವಿಸ್ತರಿಸಿದ ಅನುಮಾನವ್ಯಕ್ತವಾಗಿದೆ.
ಪೂಣೆಯ ಅಶ್ವಿನಿ `ಪೆದ್ದ’ವಾಡ ಅವರು ತಮ್ಮ ಮಗಳ ನಿರ್ಮಾಣ ಗೆ ಸಾಲ ಕೊಡಸಲು ಅಲೆದಾಡುತ್ತಿದ್ದರು. ಭಾರೀ ಪ್ರಮಾಣದ ಹೂಡಿಕೆ ಅಗತ್ಯವಿದ್ದ ಕಾರಣ ಅವರು ಮಹಮದ್ ಆಸೀಫ್ ಅವರನ್ನು ಭೇಟಿಯಾಗಿದ್ದರು. ಮಹಮದ್ ಆಸೀಫ್ ತನ್ನನ್ನು ಸುಧೀರ್ ಮೆಹ್ರಾ ಎಂದು ಪರಿಚಯಿಸಿಕೊಂಡು `ಹಣಕಾಸು ಸಹಾಯ ಮಾಡುವೆ’ ಎಂದಿದ್ದರು. `ತನಗೆ ಅನೇಕ ಬಂಡವಾಳ ಹೂಡಿಕೆದಾರರ ಪರಿಚಯವಿದೆ’ ಎಂದು ನಂಬಿಸಿದ್ದರು.
ಆಗ, ಅಶ್ವಿನಿ ಪೆದ್ದವಾಡ ಅವರು 50 ಕೋಟಿ ಸಾಲ ಕೇಳಿದ್ದರು. ವಿವಿಧ ಕಂಪನಿಗಳಿಗೆ ಹಣಕಾಸು ನೆರವು ನೀಡಿರುವ ಬಗ್ಗೆ ನಕಲಿ ದಾಖಲೆ ತೋರಿಸಿದ ಮಹಮದ್ `ಸಾಲಪಡೆಯಲು 60 ಲಕ್ಷ ರೂ ಮುಂಗಡ ಪಾವತಿ ಮಾಡಬೇಕು’ ಎಂದಿದ್ದರು. ಅದರಂತೆ 60 ಲಕ್ಷ ರೂ ಹಣಪಡೆದು 2 ಕೋಟಿ ರೂ ಮಂಜೂರಿ ಮಾಡಿಸಿದ್ದರು. ಅದಾದ ನಂತರ ಮತ್ತೊಬ್ಬರು ಅಶ್ವಿನಿ ಅವರನ್ನು ಹುಬ್ಬಳ್ಳಿಯಲ್ಲಿ ಭೇಟಿ ಮಾಡಿ 1.82 ಕೋಟಿ ರೂ ಹಣದ ಚೀಲ ನೀಡಿದ್ದರು. ಚೀಲದ ಮೇಲ್ಬಾಗ ಅಸಲಿ ನೋಟುಗಳಿದ್ದು, ಒಳಗಡೆಯಿದ್ದ ನೋಟುಗಳ ಮೇಲೆ `ಚಿಲ್ಡçನ್ ಬ್ಯಾಂಕ್ ಆಫ್ ಇಂಡಿಯಾ’ ಎಂದು ಬರೆದಿತ್ತು.
ಮೋಸ ಹೋಗಿರುವುದನ್ನು ಅರಿತ ಪೆದ್ದವಾಡ ಅವರು ವಿದ್ಯಾನಗರ ಪೊಲೀಸರಿಗೆ ದೂರು ನೀಡಿದರು. ಅಷ್ಟರೊಳಗೆ 60 ಲಕ್ಷ ಹಣಪಡೆದಿದ್ದ ಮೊಹಮ್ಮದ್ ಆಸಿಫ್ ಮುರುಡೇಶ್ವರದಲ್ಲಿ ಮೋಜು ಮಸ್ತಿ ಮಾಡುತ್ತಿದ್ದರು. ಆತನನ್ನು ಬಂಧಿಸಿದ ಪೊಲೀಸರು ನಕಲಿ ನೋಟು ಚಲಾವಣೆ ಹಾಗೂ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಮೊಹಮ್ಮದ್ ಆಸಿಫ್ 2017-18ರ ಅವಧಿಯಲ್ಲಿ ಬೆಂಗಳೂರಿನಲ್ಲಿ ಸಹ ಇದೇ ರೀತಿಯ ವಂಚನೆಯಲ್ಲಿ ಭಾಗಿಯಾಗಿರು. ತಮಿಳುನಾಡಿನ ಮುದ್ರಣಾಲಯದಿಂದ ನಕಲಿ ನೋಟುಪಡೆದಿರುವ ಬಗ್ಗೆ ಗೊತ್ತಾಗಿದೆ. ಆತನ ಬಳಿಯಿದ್ದ ಕಾರು ಹಾಗೂ 2 ಮೊಬೈಲ್ ಫೋನ್ ವಶಕ್ಕೆಪಡೆದ ಬಗ್ಗೆ ಹುಬ್ಬಳ್ಳಿ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ.