ಹಮಾಮಾನ ಇಲಾಖೆ ನೀಡಿದ ಮಾಹಿತಿಗಳ ಪ್ರಕಾರ ಜೂನ್ 14ರ ಶನಿವಾರ ಹಾಗೂ ಜೂನ್ 15ರ ಭಾನುವಾರ ಸಹ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಾಗಲಿದೆ. ಆದರೆ, ಜೂನ್ 15ರಂದು ಶಾಲಾ-ಕಾಲೇಜುಗಳಿಗೆ ರಜೆ ಇಲ್ಲ.
ಕಳೆದ 24 ಗಂಟೆಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ 31.4 ಮಿಮೀ,ಭಟ್ಕಳದಲ್ಲಿ 229.7 ಹಳಿಯಾಳ 5.7ಮಿಮೀ, ಹೊನ್ನಾವರ 121.6ಮಿಮೀ, ಕಾರವಾರ 104ಮಿಮೀ, ಕುಮಟಾ 58.2ಮಿಮೀ, ಮುಂಡಗೋಡ 12ಮಿಮೀ, ಸಿದ್ದಾಪುರ 17.1ಮಿಮೀ ಮಳೆಯಾಗಿದೆ.
ಶಿರಸಿಯಲ್ಲಿ 21.5ಮಿಮೀ, ಸೂಪಾ 19.8ಮಿಮೀ, ಯಲ್ಲಾಪುರ 15.1ಮಿಮೀ, ದಾಂಡೇಲಿಯಲ್ಲಿ 6.0ಮಿಲಿ ಮೀಟರ್ ಮಳೆ ಸುರಿದಿದೆ. 24 ಗಂಟೆಗಳಲ್ಲಿ 1 ಮನೆಗೆ ಭಾಗಶಃ ಹಾನಿ ಸಂಭವಿಸಿದ್ದು, ಕಾರವಾರದ ಅರ್ಗಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಕಾಳಜಿ ಕೇಂದ್ರ ತೆರೆಯಲಾಗಿದೆ. ಇಲ್ಲಿ ಸದ್ಯ 35 ಮಂದಿಗೆ ಆಶ್ರಯ ಒದಗಿಸಲಾಗಿದೆ.

ಇನ್ನೂ ಎರಡು ದಿನಗಳ ಕಾಲ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ವಾತಾವರಣ ಮುಂದುವರೆಯಲಿದ್ದು, ಸೋಮವಾರ ಮಳೆ ಕಡಿಮೆ ಆಗುವ ಸಾಧ್ಯತೆಯಿದೆ. ಶನಿವಾರ ಹಾಗೂ ಭಾನುವಾರ ಗರಿಷ್ಟ 64.4ಮಿಮೀ ಮಳೆಯಾಗುವ ಲಕ್ಷಣವಿರುವ ಬಗ್ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಭಟ್ಕಳ – ಹೊನ್ನಾವರ ಭಾಗದಲ್ಲಿ ಶನಿವಾರ 115.5ಮಿಮೀವರೆಗೂ ಮಳೆ ಸುರಿಯುವ ಮಾಹಿತಿಯಿದೆ.