ಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಕುಮಟಾದಲ್ಲಿಯೂ ಮಳೆಯಿಂದ ನೆರೆ ಪ್ರವಾಹ, ಗುಡ್ಡ ಕುಸಿತದ ಆತಂಕ ಸೃಷ್ಠಿಯಾಗಿದೆ.
ಶಿರಸಿ-ಸಿದ್ದಾಪುರ ಭಾಗದಲ್ಲಿ ಸದ್ಯ ಮಳೆಯಾಗುತ್ತಿದ್ದು, ಘಟ್ಟದ ಮೇಲ್ಬಾಗದಲ್ಲಿ ಆದ ಮಳೆಯಿಂದ ಕುಮಟಾದಲ್ಲಿ ನೆರೆ ಪ್ರವಾಹದ ಸಾಧ್ಯತೆ ಹೆಚ್ಚಿದೆ. ಈಗಾಗಲೇ ನದಿ-ಕೊಳ್ಳಗಳು ತುಂಬಿಕೊoಡಿದೆ. ಈ ಹಿನ್ನಲೆ ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಕಾಮಕರ್ ಸೋಮವಾರ ನೆರೆ ಸಂಭವನೀಯ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಐಗಳಕೂರ್ವೆ, ಕೋಡ್ಕಣಿಯ ಶಶಿಹಿತ್ತಲ ಮಜರೆ ಹಾಗೂ ಚಿಪ್ಪಿಬೋಳೆಯ ಗುಡ್ಡ ಕುಸಿಯಬಹುದಾದ ಸ್ಥಳಕ್ಕೆ ಭೇಟಿ ನೀಡಿ ಮುನ್ನಚ್ಚರಿಕೆ ಬಗ್ಗೆ ಮಾತನಾಡಿದರು. ತೋರ್ಕೆ ಬಳಿಯ ದೇವಣದಲ್ಲಿ ಮಣ್ಣು ಕುಸಿತವಾಗಿದ್ದು, ಕಂದಾಯ ಅಧಿಕಾರಿಗಳು ಆ ಭಾಗದವರಿಗೆ ಸುರಕ್ಷತ ಸ್ಥಳಕ್ಕೆ ಹೋಗುವಂತೆ ನೋಟಿಸ್ ನೀಡಿದ್ದಾರೆ. ಸೋಮವಾರ ಭೂ ವಿಜ್ಞಾನಿಗಳು ಸಹ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಶುಕ್ರವಾರ ಮಣ್ಣು ಕುಸಿದ ಕಾರಣ ಮೂರು ಮನೆಗಳಿಗೆ ಆತಂಕ ಎದುರಾಗಿತ್ತು. ಭಾನುವಾರ ಅಲ್ಲಿನವರ ಸ್ಥಳಾಂತರ ನಡೆದಿತ್ತು. ಇದೀಗ ಹೊಸ್ಕಟ್ಟಾ, ಮಸ್ಕಾ ಗ್ರಾಮದ 7 ಕುಟುಂಬಗಳಿಗೆ ನೋಟಿಸ್ ಜಾರಿಯಾಗಿದೆ. ಹೊನ್ನಾ ಗೌಡ, ಮಂಕಾಳಿ ಗೌಡ, ವೆಂಕಟ್ರಮಣ ಗೌಡ ಸಂಬoಧಿಕರ ಮನೆಗೆ ಹೋಗಿ ಆಶ್ರಯಪಡೆದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 2 ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ. ಈ ವೇಳೆ ಅಂಕೋಲಾದಲ್ಲಿ 104.3 ಮಿಮೀ,ಭಟ್ಕಳದಲ್ಲಿ 176.3 ಹಳಿಯಾಳ 23.2 ಹೊನ್ನಾವರ 153.8 ಕಾರವಾರ 120.7, , ಕುಮಟಾ 128.3 ಮುಂಡಗೋಡ 28.8, ಸಿದ್ದಾಪುರ 78.5, ಶಿರಸಿ 87.1 , ಸೂಪಾ 38.1 ಯಲ್ಲಾಪುರ 34.1 ದಾಂಡೇಲಿಯಲ್ಲಿ 29.8 ಮಿಲಿ ಮೀಟರ್ ಮಳೆ ಸುರಿದಿದೆ.