ಕಾರವಾರದ ಕಿನ್ನರ-ಸಿದ್ಧರ ಭಾಗದ ಪ್ರಯಾಣಿಕರ ಸೇವೆಯಲ್ಲಿದ್ದ ಸರ್ಕಾರಿ ಬಸ್ಸು ಸೋಮವಾರ ಗಟಾರಕ್ಕೆ ಇಳಿದಿದೆ. ಇದಕ್ಕೆ ಕಾರಣ ಆ ಭಾಗದ ಅಪೂರ್ಣ ಕುಡಿಯುವ ನೀರಿನ ಕಾಮಗಾರಿ!
ಜಲ ಜೀವನ ಮಿಶನ್ ಅಡಿ ಕಿನ್ನರ ಭಾಗದಲ್ಲಿ ಕುಡಿಯುವ ನೀರಿನ ಕಾಮಗಾರಿ ನಡೆಯುತ್ತಿದೆ. ಅರೆಬರೆ ಕೆಲಸದಿಂದ ಜನ ತೊಂದರೆಗೆ ಸಿಲುಕುತ್ತಿದ್ದಾರೆ. ಈ ಕಾಮಗಾರಿ ಹೆಸರಿನಲ್ಲಿ ಎಲ್ಲೆಂದರಲ್ಲಿ ಅಗೆಯಲಾಗಿದ್ದು, ರಸ್ತೆ ಅಂಚಿನಲ್ಲಿಯೂ ಹೊಂಡ ತೋಡಲಾಗಿದೆ. ಇದರಿಂದ ವಾಹನ ಓಡಾಟಕ್ಕೆ ಸಮಸ್ಯೆಯಾಗಿದೆ.
ನೀರಿನ ಪೈಪ್ ಅಳವಡಿಸಲು ಹೊಂಡ ತೋಡಿದವರು ಅದನ್ನು ಸರಿಯಾಗಿ ಮುಚ್ಚಿಲ್ಲ. ಹೊಂಡ ಮುಚ್ಚುವಂತೆ ಸ್ಥಳೀಯರು ಮನವಿ ಮಾಡಿದರೂ ಅದನ್ನು ಅಧಿಕಾರಿಗಳು ಕೇಳಿಸಿಕೊಂಡಿಲ್ಲ. ಹೀಗಾಗಿ ಎರಡು ದಿನದ ಹಿಂದೆ ಕಾರೊಂದು ರಸ್ತೆ ಅಂಚಿನಲ್ಲಿ ಸಿಲುಕಿಕೊಂಡಿದ್ದು, ಈ ದಿನ ಬಸ್ಸು ಸಿಕ್ಕಿ ಬಿದ್ದಿದೆ. ರಸ್ತೆ ಬಿಟ್ಟು ಕೊಂಚ ಬದಿಗೆ ಹೋದರೂ ಇಲ್ಲಿ ವಾಹನ ಪಲ್ಟಿಯಾಗುವ ಸಾಧ್ಯತೆಗಳಿದೆ.