ಅರಣ್ಯ ಭೂಮಿ ಹೋರಾಟಗಾರರ ವೇದಿಕೆಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ದಶ ಲಕ್ಷ ಗಿಡ ನೆಡುವ ಅಭಿಯಾನ ನಡೆಯುತ್ತಿದ್ದು, ಇದಕ್ಕೆ ಹಿರಿಯ ಚಿಂತಕ ಕಾಗೋಡ ತಿಮ್ಮಪ್ಪ ಹರ್ಷವ್ಯಕ್ತಪಡಿಸಿದರು.
ಈ ಅಭಿಯಾನದ ಲಾಂಚನ ಬಿಡುಗಡೆ ಮಾಡಿದ ಅವರು `ಪರಿಸರ ಜಾಗೃತ ಅಂಗವಾಗಿ ಅರಣ್ಯವಾಸಿಗಳು ಗಿಡ ನೆಡುವ ಮೂಲಕ ವೃಕ್ಷ ಕ್ರಾಂತಿ ನಡೆಸುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಹೇಳಿದರು. `ಅರಣ್ಯವಾಸಿಗಳು ಪರಿಸರ ಉಳಿಸಿ, ಬೆಳೆಸಿ. ಅರಣ್ಯದೊಂದಿಗೆ ಜೀವನ ಅವಲಂಭಿತರಾಗಿರಬೇಕು. ಪರಿಸರ ಅಭಿವೃದ್ದಿಯಲ್ಲಿ ಅರಣ್ಯವಾಸಿಗಳ ಪಾತ್ರ ಅತಿ ಮುಖ್ಯ’ ಎಂದು ಅವರು ಕರೆ ನೀಡಿದರು.
`ಮನುಷ್ಯ ತನ್ನ ಅವಶ್ಯಕತೆಗಾಗಿ ಕಾಡು ನಾಶ ಮಾಡಿರುವ ಹಿನ್ನಲೆ ಗಿಡ ನೆಡುವ ಮೂಲಕ ಪರಿಸರ ಪ್ರಜ್ಞೆ ಬೆಳೆಸಿಕೊಂಡಿರುವುದು ಅರಣ್ಯವಾಸಿಗಳ ಉತ್ತಮ ಬೆಳವಣಿಗೆ ಎಂದರು. ಈ ಅಭಿಯಾನದಲ್ಲಿ 100ಕ್ಕೂ ಅಧಿಕ ಬಗೆಯ ಗಿಡ ನಾಟಿ ನಡೆಯಲಿದೆ’ ಎಂದು ರವೀಂದ್ರ ನಾಯ್ಕ ತಿಳಿಸಿದರು.