ಶಿರಸಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಹೇಮಂತ ಮುಸ್ಟಗಿ ಅವರ ಮೇಲೆ ಎಂಟು ಜನ ದಾಳಿ ಮಾಡಿದ್ದಾರೆ. ಬಿರಿಯಾನಿ ತಿನ್ನಲು ಹೋಗಿದ್ದ ಹೇಮಂತ ಮುಷ್ಟಗಿ ಅವರಿಗೆ ಅವರ ಎದುರಾಳಿಗಳು ಮುಷ್ಠಿಯಿಂದ ಥಳಿಸಿದ್ದಾರೆ.
ಶಿರಸಿ ಕೆಎಚ್‌ಬಿ ಕಾಲೋನಿಯಲ್ಲಿ ಮನೆ ಮಾಡಿಕೊಂಡಿರುವ ಹೇಮಂತ ಮುಸ್ಟಗಿ ಅವರು ಲೇಔಟ್ ನಿರ್ಮಿಸಿ ಮಾರಾಟ ಮಾಡಿ ಬದುಕು ಕಂಡುಕೊoಡಿದ್ದರು. ರಿಯಲ್ ಎಸ್ಟೇಟ್ ಉದ್ದಿಮೆಯಲ್ಲಿ ಅವರು ಅಭಿವೃದ್ಧಿಹೊಂದುತ್ತಿದ್ದು, ಅವರ ಏಳಿಗೆ ಸಹಿಸದೇ ಕೆಲವರು ಅವರ ಮೇಲೆ ದಾಳಿ ಮಾಡಿದರು.
ಜೂನ್ 15ರ ರಾತ್ರಿ ಹೇಮಂತ ಮುಸ್ಟಗಿ ಅವರು ಸ್ನೇಹಿತರ ಜೊತೆ ಕುಮಟಾ ರಸ್ತೆಯ ಭವಾನಿ ಹೊಟೇಲಿಗೆ ಹೋಗಿದ್ದರು. ಅಲ್ಲಿ ಅವರು ಬಿರಿಯಾನಿ ಊಟ ಆರ್ಡರ್ ಮಾಡಿದ್ದರು. ಆ ವೇಳೆ ಅಲ್ಲಿಗೆ ಬಂದ ಎಂಟು ಜನ ಹೇಮಂತ ಮುಸ್ಟಗಿ ಅವರನ್ನು ನಿಂದಿಸಿದರು. `ಇಲ್ಲಿ ನಿನ್ನ ಹಾವಳಿ ಜಾಸ್ತಿ ಆಗಿದೆ. ದುಡ್ಡು ಇದೆ ಎಂದು ಜಾಸ್ತಿ ಮೆರಿಯಬೇಡ’ ಎಂದು ಹೇಳಿದರು.
ಅದಾಗಿ 15 ನಿಮಿಷಕ್ಕೆ ಅಲ್ಲಿ ಇನ್ನಷ್ಟು ಜನ ಆಗಮಿಸಿದರು. ಅವರು ಸಹ ಹೇಮಂತ ಮುಷ್ಟಗಿ ಅವರ ಜೊತೆ ಜಗಳ ಮಾಡಿದರು. ಅವರೆಲ್ಲ ಸೇರಿ ಇಟ್ಟಿಗೆಯಿಂದ ತಲೆ ಮೇಲೆ ಹೊಡೆದರು. ಮುಷ್ಟಿಯಿಂದ ಗುದ್ದಿದರು. ಜೊತೆಗೆ ಅಲ್ಲಿದ್ದ ಗಾಜಿನ ಬಾಟಲಿಯಿಂದಲೂ ಮೈಮೇಲೆ ಹೊಡೆದು ನೋವುಂಟು ಮಾಡಿದರು.
ಈ ವೇಳೆ ಹೇಮಂತ ಮುಷ್ಟಗಿ ನೆಲಕ್ಕೆ ಬಿದ್ದಿದ್ದು, ಎಲ್ಲರೂ ಸೇರಿ ಕಾಲಿನಿಂದ ತುಳಿದರು. ಆ ಆಪಾದಿತರು `ಈ ದಿನ ನೀ ಬಚಾವಾದೆ. ಇನ್ನೊಂದು ದಿನ ನಿನ್ನ ಸಾಯಿಸದೇ ಬಿಡುವುದಿಲ್ಲ’ ಎಂದು ಬೆದರಿಕೆಯನ್ನು ಒಡ್ಡಿದರು. ಇದರಿಂದ ಬೆದರಿದ ಹೇಮಂತ ಮುಷ್ಟಗಿ ಶಿರಸಿ ನಗರ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆ ದಿನ ನಡೆದಿದ್ದು ಏನು? ಎನ್ನುವುದರ ಬಗ್ಗೆ ತನಿಖೆ ಶುರು ಮಾಡಿದ್ದಾರೆ.