ಕಾರವಾರ ಅಶ್ವಿನ್ ಗುಡಿನೋ ಅವರು ಅಪರಿಚಿತ ಕಂಪನಿಯಲ್ಲಿ ಹಣ ಹೂಡಿ 11.50 ಲಕ್ಷ ರೂ ಕಳೆದುಕೊಂಡಿದ್ದಾರೆ. ಮೋಸ ಹೋದ ಬಗ್ಗೆ ಅವರು ಇದೀಗ ಸಿಇಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾರವಾರದ ನಂದನಗದ್ದಾ ಪಾದ್ರಿಭಾಗದಲ್ಲಿ ಅಶ್ವಿನ್ ಗುಡಿನೋ ಅವರು ವಾಸವಾಗಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಅವರು 21 ಲಕ್ಷ ರೂ ಸಂಪಾದಿಸಿಕೊoಡಿದ್ದರು. ಅದನ್ನು ಒಳ್ಳೆಯ ಕಡೆ ಹೂಡಿಕೆ ಮಾಡಿ ಲಾಭದ ನಿರೀಕ್ಷೆಯಲ್ಲಿದ್ದ ಅವರಿಗೆ ಇನಸ್ಟಾ ಗ್ರಾಂ ಜಾಹೀರಾತು ಆಕರ್ಷಿಸಿತು. `ಕಾಸ್ಮಟಿಕ್ ಕೇರ್’ ವಿಭಾಗದಲ್ಲಿ ಹೂಡಿಕೆ ಮಾಹಿತಿಪಡೆದ ಅವರು ಆ ಕಂಪನಿ ಸಂಪಕಿಸಿದರು.
`2 ಆರ್ಗನಿಕ್’ ಎಂಬ ಕಂಪನಿ ಮಾಲಕ ಎಂದು ಪರಿಚಯಿಸಿಕೊಂಡ ಅಪರಿಚಿತ ಅವರಿಂದ 21 ಲಕ್ಷ ರೂ ಹಣಪಡೆದರು. ಒಳ್ಳೆಯ ಲಾಭ ನೀಡುವುದಾಗಿ ಭರವಸೆ ನೀಡಿದ್ದರು. ಫೆ 25ರಂದು 21 ಲಕ್ಷ ರೂ ಹೂಡಿಕೆ ಮಾಡಿದ ಅಶ್ವಿನ್ ಗುಡಿನೋ ಅವರಿಗೆ ಆ ಕಂಪನಿ ಬಗ್ಗೆ ಅನುಮಾನ ಮೂಡಿತು. ಪ್ರಶ್ನಿಸಿದಾಗ ನಂಬಿಕೆ ಬರಲು ಕಂಪನಿಯವರು 9.50 ಲಕ್ಷ ರೂ ಮರುಪಾವತಿ ಮಾಡಿದರು. ಆದರೆ, ಉಳಿದ 11.50 ಲಕ್ಷ ನೀಡದೇ ಮೋಸ ಮಾಡಿದರು.