ಭಟ್ಕಳದಲ್ಲಿ ಕಾರ್ಪರೆಂಟರ್ ಆಗಿ ಕೆಲಸ ಮಾಡಿಕೊಂಡಿದ್ದ ಜಗದೀಶ ನಾಯ್ಕ ಅವರ ಮನೆಯಲ್ಲಿ ಕಳ್ಳತನವಾಗಿದೆ.
ಮಣಕುಳಿಯ ತಲಾಂದ ರಸ್ತೆಯಲ್ಲಿ ಜಗದೀಶ ನಾಯ್ಕ ಅವರು ವಾಸವಾಗಿದ್ದರು. ಜೂನ್ 14ರಿಂದ ಜಗದೀಶ್ ಅವರು ಮನೆಯಲ್ಲಿರಲಿಲ್ಲ. ಜೂನ್ 16ಕ್ಕೆ ಮನೆಗೆ ಬಂದು ನೋಡಿದಾಗ ಕಳ್ಳತನ ನಡೆದಿರುವುದು ಗೊತ್ತಾಯಿತು. ಮನೆಗೆ ನುಗ್ಗಿದ ಕಳ್ಳರು ಬೆಡ್ ರೂಂ ಒಳಗೆ ಪ್ರವೇಶಿಸಿದ್ದಾರೆ. ಅಲ್ಲಿದ್ದ ಕಪಾಟು ಒಡೆದು ಚಿನ್ನಾಭರಣಗಳನ್ನು ಅಪಹರಿಸಿದ್ದಾರೆ. ಬಳೆ, ನೆಕ್ಲೇಸ್, ಹವಳದ ಸರ, ಉಂಗುರ, ವೈಷ್ಣವಿ ಸರ ಸೇರಿ ವಿವಿಧ ಆಭರಣಗಳು ಕಾಣೆಯಾಗಿದೆ.
ಒಟ್ಟು 5.25 ಲಕ್ಷ ರೂ ಮೌಲ್ಯದ 175 ಗ್ರಾಂ ಬಂಗಾರದ ಜೊತೆ ಮನೆಯಲ್ಲಿದ್ದ 4 ಲಕ್ಷ ರೂ ಹಣ ಸಹ ಕಳ್ಳರ ಪಾಲಾಗಿದೆ. ಪ್ರಕರಣ ದಾಖಲಿಸಿಕೊಂಡ ಭಟ್ಕಳ ಪೊಲೀಸರು ಮನೆಗೆ ಬಂದು ಶೋಧ ನಡೆಸಿದ್ದಾರೆ. ಕಳ್ಳರ ಪತ್ತೆಗಾಗಿ ಪೊಲೀಸರು ಹುಡುಕಾಟ ಶುರು ಮಾಡಿದ್ದಾರೆ.