ಎಂಇಎಸ್, ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಬಿ ಎಸ್ ಸಿ ವಿದ್ಯಾರ್ಥಿ ಪವನ್ ತಿಮ್ಮಣ್ಣ ಗಾಂವ್ಕರ ದೇಶದ ಪ್ರತಿಷ್ಠಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಎಂ ಎಸ್ ಸಿ ಪದವಿಗಾಗಿ ನಡೆಸುವ ಜಾಮ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ.
ಭೌತಶಾಸ್ತ್ರ ವಿಷಯದಲ್ಲಿ ದೇಶಕ್ಕೆ 725ನೆಯ ರ಼್ಯಾಂಕ್ ಪಡೆದಿದ್ದಾರೆ. ಈ ರ಼್ಯಾಂಕಿಂಗ್ ಆಧಾರಿತವಾಗಿ ಐಐಟಿ ಹೈದರಾಬಾದ್ ನಲ್ಲಿ ಭೌತಶಾಸ್ತ್ರ ಎಂ ಎಸ್ ಸಿ ಪದವಿಗೆ ಪ್ರವೇಶ ಪಡೆದುಕೊಂಡಿದ್ದಾರೆ.
ಪವನ್ ಗಾಂವ್ಕರ್ ಯಲ್ಲಾಪುರ ತಾಲೂಕಿನ ಕಲ್ಲಾಳ ದೋಣಿಗದ್ದೆಯ ತಿಮ್ಮಣ್ಣ ರಾಮಕೃಷ್ಣ ಗಾಂವ್ಕರ ಹಾಗೂ ಸೀತಾ ತಿಮ್ಮಣ್ಣ ಗಾಂವ್ಕರ ದಂಪತಿಯ ಪುತ್ರ.