ಯಲ್ಲಾಪುರ: ಜಲಪಾತ ವೀಕ್ಷಣೆಗೆ ಬರುತ್ತಿದ್ದ ಪ್ರವಾಸಿಗರ ಬಸ್ ಮಾಗೋಡಿನ ಕಾರಕುಂಕಿ ಘಟ್ಟದ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.
ಮಾಗೋಡ ಜಲಪಾತ ವೀಕ್ಷಣೆಗೆ ಬರುತ್ತಿದ್ದ ಪ್ರವಾಸಿಗರು ಬಸ್ ನಲ್ಲಿದ್ದರು. ಕಾರಕುಂಕಿ ಘಟ್ಟದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಬಸ್ ಪಲ್ಟಿಯಾಗಿದೆ.
ಬಸ್ ನಲ್ಲಿ ಬೆಂಗಳೂರು ಮೂಲದ 25 ಕ್ಕೂ ಹೆಚ್ಚು ಪ್ರವಾಸಿಗರಿದ್ದರೆಂದು ಹೇಳಲಾಗಿದ್ದು, ಅವರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇನ್ನೂ ಸ್ವಲ್ಪ ಪಕ್ಕಕ್ಕೆ ಬಸ್ ಬಿದ್ದರೂ ಸಮೀಪದ ಹಳ್ಳದಲ್ಲಿ ಪಲ್ಟಿಯಾಗುವ ಅಪಾಯವಿತ್ತು. ಅದೃಷ್ಟವಶಾತ್ ದುರಂತ ಸಂಭವಿಸಿಲ್ಲ.




