ಯಲ್ಲಾಪುರ ತಾಲೂಕಿನ ಮಾವಿನಕಟ್ಟಾದ ಸರ್ಕಾರಿ ಆಸ್ಪತ್ರೆಯ ಹಿಂದಿನ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳು ಓಡಿ ಹೋಗಿದ್ದಾರೆ.
ಮಾವಿನಕಟ್ಟಾದ ಹರೀಶ ಗಣಪತಿ ನಾಯ್ಕ, ಲಂಬೋದರ ದೇವಪ್ಪ ನಾಯ್ಕ, ನಾಗರಾಜ ಶಂಕರ ದೇವಾಡಿಗ, ರಾಜೇಂದ್ರ ಮಂಜುನಾಥ ದೇವಾಡಿಗ, ಸಂತೋಷ ನಾರಾಯಣ ನಾಯ್ಕ, ಓಮು ವೆಂಕಟ ಗೌಡ, ಮಂಜುನಾಥ ಸುಕ್ರು ದೇವಾಡಿಗ ಬಂಧಿತರು. ಇವರೊಂದಿಗಿದ್ದ ಬೆಳ್ಳಂಬಿಯ ಗಜಾನನ ಮರಾಠಿ ಹಾಗೂ ಬಿಸ್ಲಕೊಪ್ಪದ ಗಣಪತಿ ರಾಮಾ ಗೌಡ ಓಡಿ ಹೋಗಿದ್ದಾರೆ.
ಇವರು ಮಾವಿನಕಟ್ಟಾದ ಸರ್ಕಾರಿ ಆಸ್ಪತ್ರೆಯ ಹಿಂದಿನ ಸಾರ್ವಜನಿಕ ಸ್ಥಳದಲ್ಲಿ ಜೂಜಾಡುತ್ತಿದ್ದ ವೇಳೆ ಪೊಲೀಸರು ದಾಳಿ ನಡೆಸಿದ್ದು, 7 ಜನರನ್ನು ವಶಕ್ಕೆ ಪಡೆದಿದ್ದಾರೆ. ಇಬ್ಬರು ಓಡಿ ಹೋಗಿದ್ದಾರೆ. ಬಂಧಿತರಿಂದ 27,840 ರೂ ಹಣ, ಜೂಜಾಟದ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ.




