ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಷ್ಠಾವಂತ ಸ್ವಯಂ ಸೇವಕ, ಆದರ್ಶ ವ್ಯಕ್ತಿತ್ವದ ದಿ.ಸತೀಶ ಕಟ್ಟಿಗೆ ಅವರ ಮೂರನೇ ಪುಣ್ಯ ಸ್ಮರಣೆಯ ಪ್ರಯುಕ್ತ ಯಲ್ಲಾಪುರದ ಅಡಕೆ ಭವನದಲ್ಲಿ ಬೃಹತ್ ರಕ್ತದಾನ ಶಿಬಿರ ಮಂಗಳವಾರ ನಡೆಯಿತು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಹುಬ್ಬಳ್ಳಿಯ ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕ ರಾಷ್ಟ್ರೋತ್ಥಾನ ರಕ್ತ ಕೇಂದ್ರದ ಸಹಯೋಗದೊಂದಿಗೆ ನಡೆದ ಶಿಬಿರದಲ್ಲಿ ಸತೀಶ ಕಟ್ಟಿಗೆ ಅವರ ಮೇಲಿನ ಅಭಿಮಾನದಿಂದ ಆರ್.ಎಸ್.ಎಸ್ ಸ್ವಯಂ ಸೇವಕರು ಹಾಗೂ ತಾಲೂಕಿನ ವಿವಿಧೆಡೆಯಿಂದ ಬಂದ ನೂರಾರು ಜನರು ರಕ್ತದಾನ ಮಾಡಿದರು.
ಆರ್.ಎಸ್.ಎಸ್.ನ ಹಾವೇರಿ ಜಿಲ್ಲಾ ಕಾರ್ಯವಾಹ ಯೋಗೇಂದ್ರ ಹೊಳೆಬಾಗಿಲು ಮಾತನಾಡಿ, ದಿ.ಸತೀಶ ಕಟ್ಟಿಗೆ ಅವರು ಸಂಘಟನೆಗೆ ನಿಸ್ವಾರ್ಥವಾಗಿ ಸಮರ್ಪಿಸಿಕೊಂಡ ವಿಚಾರಗಳನ್ನು ಸ್ಮರಿಸಿದರು.
ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಡಾ.ದತ್ತಮೂರ್ತಿ ಕುಲಕರ್ಣಿ ರಕ್ತದಾನದ ಮಹತ್ವವನ್ನು ವಿವರಿಸಿದರು. ಡಿಸಿಎಫ್ ಹರ್ಷ ಭಾನು ಮಾತನಾಡಿ, ತಮ್ಮ ವ್ಯಕ್ತಿತ್ವ ನಿರ್ಮಾಣದಲ್ಲಿ ಆರ್.ಎಸ್.ಎಸ್ ನ ಪಾತ್ರದ ಬಗ್ಗೆ ಮಾತನಾಡಿದರು.
ಹಿರಿಯ ಸ್ವಯಂ ಸೇವಕ ವಿ.ಎಸ್.ಭಟ್ಟ ಸಿದ್ರಪಾಲ ಅಧ್ಯಕ್ಷತೆ ವಹಿಸಿದ್ದರು. ಗಣಪತಿ ಮೆಣಸುಮನೆ ರಚಿಸಿದ ದೇಶಭಕ್ತಿಗೀತೆಯನ್ನು ನರಸಿಂಹ ಭಟ್ಟ ಚಿಕ್ಯಾನಮನೆ ಹಾಡಿದರು. ದಾಂಡೇಲಿ ಜಿಲ್ಲಾ ಸಂಘದ ಮುಖ್ಯಸ್ಥ ಡಿ.ಎಸ್.ಭಟ್ಟ, ರಾಮಕೃಷ್ಣ ಕವಡಿಕೆರೆ, ಗೋಪಾಲಕೃಷ್ಣ ಗಾಂವ್ಕರ ನಿರ್ವಹಿಸಿದರು.
ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರದ ಡಾ.ದತ್ತಮೂರ್ತಿ ಕುಲಕರ್ಣಿ, ನವೀನ ಚಿಕ್ಕಮಠ, ಸಿದ್ದು ಅಂಗಡಿ, ಡಾ.ಚೇತನ ಕಾನಳ್ಳಿ, ಶಿವಾಜಿ ಗುಂಡಣ್ಣವರ್, ರೇಷ್ಮಾ ಗುಂಡಣ್ಣವರ್, ದ್ಯಾಮಣ್ಣ ಜೋಗಣ್ಣನವರ್, ಸುಮನ್ ಉಪ್ಪಾರ, ರಂಜನ ಲಮಾಣಿ, ನಿತೀಶ ಬಾರ್ಕಿ, ನಿತ್ಯಾನಂದ ಕೋಡಬಳಿ, ನಾಗರಾಜ ರ಼್ಯಾವಣಕಿ, ಉಮೇಶ ಅವರು ದಾನಿಗಳಿಂದ ರಕ್ತ ಸಂಗ್ರಹಿಸಿದರು.





