6

ಸೇಫ್ ಸ್ಟಾರ್ ಸೌಹಾರ್ದ ಸಹಕಾರಿಯಿಂದ ಜೀವನ ಮೌಲ್ಯ ನಿಧಿಯಡಿ ವಿಮಾ ಪರಿಹಾರ ವಿತರಣೆ

ಯಲ್ಲಾಪುರದ ಸೇಫ್ ಸ್ಟಾರ್ ಸೌಹಾರ್ದ ಸಹಕಾರಿ ಸಂಘದ ಶಾಖೆಯಲ್ಲಿ ಜೀವನ ಮೌಲ್ಯದ ನಿಧಿ ಯೋಜನೆಯಡಿ ಸದಸ್ಯರ ಕುಟುಂಬಕ್ಕೆ ವಿಮಾ ಪರಿಹಾರದ ಚೆಕ್ ವಿತರಿಸಲಾಯಿತು.

‌ ಮೃತಪಟ್ಟ ಸದಸ್ಯರಾದ ದುರ್ಗವ್ವಾ ವಿಶ್ವಾಸ ಬೋವಿ ಕುಟುಂಬಕ್ಕೆ 50 ಸಾವಿರ ರೂ ಹಾಗೂ ಜೇವಾನಿ ಮ್ಯಾಕ್ಸಿ ಸಿದ್ದಿ ಅವರ ಕುಟುಂಬಕ್ಕೆ 45 ಸಾವಿರ ರೂ ಪರಿಹಾರದ ಮೊತ್ತ ವಿತರಿಸಲಾಯಿತು.

ಯಲ್ಲಾಪುರ ಶಾಖೆಯ ಅಧ್ಯಕ್ಷ ಜಿ.ಎಸ್.ಭಟ್ಟ ಕಾರೆಮನೆ ಚೆಕ್ ವಿತರಿಸಿ ಮಾತನಾಡಿ, ಸಂಸ್ಥೆ ಕೇವಲ ಸಾಲ ವಿತರಣೆ ಅಥವಾ ಹಣಕಾಸಿನ ವ್ಯವಹಾರಕ್ಕೆ ಸೀಮಿತವಾಗಿಲ್ಲ. ಸದಸ್ಯರು, ಸಾಲಗಾರರ ಹಿತವನ್ನೂ ದೃಷ್ಟಿಯಲ್ಲಿರಿಸಿಕೊಂಡು ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ ಎಂದರು.‌

ಹಿರಿಯ ಪತ್ರಕರ್ತ ಸುಬ್ರಾಯ ಬಿದ್ರೆಮನೆ ಮಾತನಾಡಿ, ಸೇಫ್ ಎಂಬುದು ಸಂಘದ ಹೆಸರಿನಲ್ಲೇ ಇದೆ. ಗ್ರಾಹಕರು ಸಂಘದಲ್ಲಿ ವ್ಯವಹಾರ ಮಾಡಿದರೆ ಎಲ್ಲ ರೀತಿಯಲ್ಲೂ ಸುರಕ್ಷಿತರಾಗಿರುತ್ತಾರೆ ಎಂದರು.

ಪತ್ರಕರ್ತ ಶ್ರೀಧರ ಅಣಲಗಾರ ಮಾತನಾಡಿ, ಜೀವನ ಮೌಲ್ಯ ನಿಧಿ ಯೋಜನೆಯ ಸದಸ್ಯರಿಗೆ ಉಪಯುಕ್ತವಾಗಿದೆ. ಸೇಫ್ ಸ್ಟಾರ್ ಸಹಕಾರಿ ಆರಂಭಿಸಿರುವ ಈ ಯೋಜನೆ ಇತರ ಸಹಕಾರಿ ಸಂಘಗಳಿಗೂ ಮಾದರಿಯಾಗಿದೆ ಎಂದರು.

ಸಂಘದ ಹಿರಿಯ ವ್ಯವಸ್ಥಾಪಕ ಸುಬ್ರಾಯ ಪೈ ಪ್ರಾಸ್ತಾವಿಕವಾಗಿ ಮಾತನಾಡಿದರು. ವ್ಯವಸ್ಥಾಪಕ ಮಂಜುನಾಥ ಹಿರೇಮಠ ನಿರ್ವಹಿಸಿದರು.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page