ಹೆದ್ದಾರಿ ಬಿಟ್ಟು ಬದಿಗೆ ಸಾಗಿದ ಲಾರಿ ಮನೆಯ ಗೋಡೆಗೆ ಡಿಕ್ಕಿ ಹೊಡೆದು ಉರುಳಿಸಿ, ಲಾರಿಯೂ ಉರುಳಿ ಬಿದ್ದ ಘಟನೆ ಯಲ್ಲಾಪುರ ತಾಲೂಕಿನ ಚಿನ್ನಾಪುರದಲ್ಲಿ ನಡೆದಿದೆ.
ಲಾರಿ ಮಂಗಳೂರಿನಿಂದ ದಾಂಡೇಲಿಗೆ ಪೊಲ್ಸ್ ತುಂಬಿಕೊಂಡು ಹೋಗುತ್ತಿತ್ತು. ಅರಬೈಲ್ ಘಟ್ಟ ಹತ್ತಿ ಬಂದು ಚಿನ್ನಾಪುರ ಬಳಿ ನಿಯಂತ್ರಣ ತಪ್ಪಿ ರಸ್ತೆ ಪಕ್ಕ ಇದ್ದ ಸತೀಶ ಬಾಳಾ ನಾಯ್ಕ ಅವರ ಮನೆಯ ಗೋಡೆಗೆ ಡಿಕ್ಕಿ ಹೊಡೆದು, ಪಲ್ಟಿಯಾಗಿದೆ.
ಡಿಕ್ಕಿ ರಭಸಕ್ಕೆ ಸತೀಶ ನಾಯ್ಕ ಅವರ ಮನೆಯ ಅಡುಗೆ ಕೋಣೆಯ ಗೋಡೆ ಸಂಪೂರ್ಣ ಕುಸಿದಿದೆ. ಲಾರಿಯಲ್ಲಿದ್ದ ಪೊಲ್ಸ್ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಲಾರಿ ಬಿದ್ದ ಶಬ್ದ ಕೇಳಿ ಮನೆಯಲ್ಲಿದ್ದವರೆಲ್ಲ ಹೊರಗೆ ಓಡಿ ಬಂದಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಅತಿಯಾದ ವೇಗವಾಗಿ ಲಾರಿ ಚಲಾಯಿಸಿಕೊಂಡು ಬಂದ ಚಾಲಕನ ಕುರಿತು ಪ್ರತ್ಯಕ್ಷ ದರ್ಶಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸ್ಥಳ ಭೇಡಿ ನೀಡಿ ಪರಿಶೀಲಿಸಿದ್ದಾರೆ.