ಯಲ್ಲಾಪುರ ತಾಲೂಕಿನ ಸವಣಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸವಣಗೇರಿಯ ವಿದ್ಯಾರ್ಥಿಗಳು ಭತ್ತದ ಗದ್ದೆಯಲ್ಲಿ ನಾಟಿ ಮಾಡುವ ಮೂಲಕ ಕೃಷಿಯ ಅನುಭವ ಪಡೆದರು.
7 ನೇ ತರಗತಿಯ ಪಠ್ಯದಲ್ಲಿರುವ ‘ಸೀನ ಸೆಟ್ಟರು ನಮ್ಮ ಟೀಚರು ಎಂಬ ಪಾಠದ ಬೋಧನೆಯ ಭಾಗವಾಗಿ ಶಾಲೆಯ ಸಮೀಪದ ಶ್ರೀಪಾದ ಹೆಗಡೆ, ಜಯಲಕ್ಷ್ಮೀ ಹೆಗಡೆಯವರ ಗದ್ದೆಯಲ್ಲಿ ಈ ಚಟುವಟಿಕೆ ನಡೆಸಲಾಯಿತು.
ರೈತರಾದ ಶ್ರೀಪಾದ ಹೆಗಡೆ, ಜಯಲಕ್ಷ್ಮೀ ಹೆಗಡೆ, ಗದ್ದೆ ನಾಟಿ ಕಾರ್ಯದಲ್ಲಿ ತೊಡಗಿದ್ದ ಮೋಹನ್ ಪಡ್ತಿ, ಲಕ್ಷ್ಮೀ ಪಡ್ತಿ ಅವರು ಸಸಿ ಕೀಳುವುದು ಮತ್ತು ಸಸಿ ನೆಡುವ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು. ವಿದ್ಯಾರ್ಥಿಗಳು ಆಸಕ್ತಿಯಿಂದ ಗದ್ದೆಯಲ್ಲಿ ಇಳಿದು ಸಸಿ ಕಿತ್ತು ನಾಟಿ ಮಾಡಿ, ವಿಶೇಷ ಅನುಭವ ಪಡೆದರು.
ಶಾಲೆಯ ಮುಖ್ಯೋಪಾಧ್ಯಾಯ ಸಂಜೀವಕುಮಾರ ಹೊಸ್ಕೇರಿ, ಶಿಕ್ಷಕರಾದ ಗೀತಾ, ಪೂರ್ಣಿಮಾ, ಪವಿತ್ರಾ, ಬಿ.ಇಡಿ ಪ್ರಶಿಕ್ಷಣಾರ್ಥಿಗಳಾದ ವೈಷ್ಣವಿ ಗೌಡ, ಅಫ್ರೀನ್.ಕೆ ಉಪಸ್ಥಿತರಿದ್ದರು.