ಭಟ್ಕಳ ತಾಲೂಕಿನ ಶಿರಾಲಿಯ ಹುಲ್ಲುಕ್ಕಿ ಅರಣ್ಯದಲ್ಲಿ ನಡೆಯುತ್ತಿದ್ದ ಕೋಳಿ ಅಂಕದ ಮೇಲೆ ಪೊಲೀಸರು ದಾಳಿ ನಡೆಸಿ 11 ಜನರನ್ನು ವಶಕ್ಕೆ ಪಡೆದಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಭಟ್ಕಳ ಗ್ರಾಮೀಣ ಠಾಣೆಯ ಪೊಲೀಸರು ಕೋಳಿ ಅಂಕ ಜೂಜಾಟದಲ್ಲಿ ತೊಡಗಿದ್ದ 11 ಜನರನ್ನು ವಶಕ್ಕೆ ಪಡೆದರು.
ಇವರಿಂದ 4 ಆಟೊರಿಕ್ಷಾಗಳು, 5 ಬೈಕ್ ಗಳು, 3 ಮೊಬೈಲ್ ಫೋನ್ ಗಳು ಹಾಗೂ 3305 ರೂ ವಶಪಡಿಸಿಕೊಳ್ಳಲಾಗಿದೆ. ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.