ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘದ ಯಲ್ಲಾಪುರ ಶಾಖೆಯಲ್ಲಿ ಕಾರ್ಯನಿರ್ವಹಿಸಿದ ಸಿಬ್ಬಂದಿ ಸಿಂಚನಾ ಭಾಗ್ವತ ಅವರನ್ನು ಸಂಸ್ಥೆಯ ವತಿಯಿಂದ ಗೌರವಿಸಿ, ಬೀಳ್ಕೊಡಲಾಯಿತು.
ಬೆಳಗಾವಿಯ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸಲು ತೆರಳುತ್ತಿರುವ ಅವರಿಗೆ ಶುಭ ಹಾರೈಸಲಾಯಿತು.
ಶಾಖಾ ಅಧ್ಯಕ್ಷ ಕೆ ಎಸ್ ಭಟ್ಟ ಅನಗೋಡ, ಸಂಸ್ಥೆಯ ನಿರ್ದೇಶಕ ರವೀಂದ್ರ ಹೆಗಡೆ ಹೀರೆಸರ, ಮುಖ್ಯ ಕಾರ್ಯನಿರ್ವಾಹಕ ಜಿ ಎಸ್ ಹೆಗಡೆ, ಶಾಖಾ ವ್ಯವಸ್ಥಾಪಕ ವಿನೋದ ಮರಾಠಿ, ಸಿಬ್ಬಂದಿ ರಘುವೀರ ಭಟ್ಟ,
ಸೋನು ಕೊಕರೆ ಉಪಸ್ಥಿತರಿದ್ದರು.