ಯಲ್ಲಾಪುರ ತಾಲೂಕಿನ ತೇಲಂಗಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅಪರೂಪದ ಕಲೆಯ ಮೂಲಕ ಗಮನ ಸೆಳೆದಿದ್ದಾಳೆ.
ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿ ಮಾನಸಾ ರಾಘವೇಂದ್ರ ಗಾಂವ್ಕರ ತುಳಸಿ ಎಲೆಗಳ ಮೇಲೆ ಕೃಷ್ಣನ ಚಿತ್ರವನ್ನು ಸುಂದರವಾಗಿ ಬಿಡಿಸಿದ್ದಾಳೆ.
ಚಿಕ್ಕದಾಗಿರುವ ತುಳಸಿ ಎಲೆಗಳ ಮೇಲೆ ಕೃಷ್ಣನ ಬಿಂಬವನ್ನು ಸ್ಪಷ್ಟವಾಗಿ ಮೂಡಿಸುವುದು ಅಷ್ಟು ಸುಲಭದ ಕೆಲಸವೇನಲ್ಲ.
ಕಲೆಯಲ್ಲಿ ವಿಶೇಷ ತರಬೇತಿ ಇಲ್ಲದೇ ಇದ್ದರೂ, ಕಲೆಯ ಕುರಿತಾಗಿ ಮಾನಸಾಳಿಗೆ ಇರುವ ಆಸಕ್ತಿ, ಶ್ರದ್ಧೆಯಿಂದ ಈ ಪ್ರತಿಭೆ ಹೊರಹೊಮ್ಮಿದೆ.