ಯಲ್ಲಾಪುರ ತಾಲೂಕಿನ ಆನಗೋಡ ಬೆಲ್ತರಗದ್ದೆಯಲ್ಲಿ ಲಕ್ಷ್ಮೀ ಸಿದ್ದಿ ವೈಯಕ್ತಿಕವಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಸಾವಿಗೆ ಶರಣಾಗಿದ್ದಾರೆ ಹೊರತು, ಹಸಿವಿನ ಕಾರಣದಿಂದಲ್ಲ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ.ಕೆ ಸ್ಪಷ್ಟಪಡಿಸಿದ್ದಾರೆ.
ಕಳೆದ ಆ.2 ರಂದು ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡು ಗಾಯಗೊಂಡಿದ್ದ ಲಕ್ಷ್ಮೀ ಸಿದ್ದಿ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಮನೆಗೆ ಮರಳಿದ್ದರು. ನಂತರ ಮೃತರಾಗಿದ್ದಾರೆ.
ಕುಟುಂಬದವರಲ್ಲಿ ಈ ಬಗ್ಗೆ ವಿಚಾರಿಸಿದಾಗ, ಮೃತ ಮಹಿಳೆ ವೈಯಕ್ತಿಕ ಕಾರಣಗಳಿಂದ ಮನನೊಂದು ಪ್ರತ್ಯೇಕವಾಗಿ ವಾಸವಾಗಿದ್ದರು. ಊಟಕ್ಕಾಗಿ ತನ್ನ ತಾಯಿಯ ಮನೆಗೆ ಹೋಗುತ್ತಿದ್ದರು. ಮೃತರ ತಂದೆ ತಾಯಿಯರಿಗೆ ಅನ್ನ ಭಾಗ್ಯ ಯೋಜನೆಯಡಿ ಹಾಗೂ ಸಿದ್ದಿ ಸಮುದಾಯಕ್ಕೆ ನೀಡುವ ಆಹಾರ ಕಿಟ್ ದೊರಕುತ್ತಿದೆ.
ವೈಯಕ್ತಿಕ ಕಾರಣಕ್ಕಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಲಕ್ಷ್ಮೀ ಸಿದ್ದಿ ಸಾವಿಗ ಶರಣಾಗಿದ್ದಾರೆ. ಹಸಿವಿನಿಂದ ಅಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.