ಯಲ್ಲಾಪುರ ತಾಲೂಕಿನ ಆನಗೋಡಿನ ಬೆಲ್ತರಗದ್ದೆಯಲ್ಲಿ ಬೆಂಕಿ ಹಚ್ಚಿಕೊಂಡು ಸಾವನ್ನಪ್ಪಿದ ಲಕ್ಷ್ಮೀ ಸಿದ್ದಿ ಅವರ ಮನೆಗೆ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿಯವರು ಭೇಟಿ ನೀಡಿದರು. ಮೃತ ಲಕ್ಷ್ಮೀ ಸಿದ್ದಿ ಕುಟುಂಬದವರಿಗೆ ಸಾಂತ್ವನ ಹೇಳಿದರು.
ನಂತರ ಮಾತನಾಡಿದ ಸಮಿತಿಯ ಅಧ್ಯಕ್ಷ ಉಲ್ಲಾಸ ಶಾನಭಾಗ, ಲಕ್ಷ್ಮೀ ಸಿದ್ದಿ ಅವರು ಕುಟುಂಬ ಕಲಹದಿಂದ ಬೇಸತ್ತು ದೇಹ ದಹನ ಮಾಡಿಕೊಂಡಿದ್ದಾರೆಂದು ತಿಳಿಯಿತು. ಅವರ ಸಾವಿಗೆ ಹಸಿವು ಕಾರಣ ಅಲ್ಲ ಎಂದರು.
ಮೃತರ ಕುಟುಂಬದವರಿಗೆ ಸರ್ಕಾರದಿಂದ ನೀಡಬೇಕಾದ ಎಲ್ಲ ಸೌಲಭ್ಯಗಳನ್ನು ತಲುಪಿಸುವ ಕ್ರಮ ಕೈಗೊಳ್ಳಲಾಗುವುದೆಂದರು.
ಸಮಿತಿಯ ಸದಸ್ಯರಾದ ನರ್ಮದಾ ನಾಯ್ಕ, ಮುಷರತ್ ಖಾನ್, ಅನಿಲ ಮರಾಠೆ, ಮಹೇಶ ನಾಯ್ಕ, ಅನಂತ ಕೋಟೆಮನೆ ಇದ್ದರು.
.