ಬೇಡ್ತಿ ನದಿಯಲ್ಲಿ ಮೀನು ಹಿಡಿದು ಮರಳುವಾಗ ಸಹೋದರರಿಬ್ಬರು ಯಲ್ಲಾಪುರ ತಾಲೂಕಿನ ಕವಲಗಿಯ ಹಳ್ಳದಲ್ಲಿ ಮುಳುಗಿ ಕಾಣೆಯಾಗಿದ್ದಾರೆ.
ಮಾದನಸರದ ಮಹಮ್ಮದ್ ರಫೀಕ್ ಇಬ್ರಾಹಿಂ ಸಾಬ್ ಸೈಯ್ಯದ್ ಹಾಗೂ ಅವರ ತಮ್ಮ ಮಹಮ್ಮದ್ ಹನೀಫ್ ಇಬ್ರಾಹಿಂ ಸಾಬ್ ಸೈಯದ್ ಕಾಣೆಯಾದವರು. ಮಾದನಸರದ 8 ಮಂದಿ ಸೇರಿ ಕವಲಗಿ ಹಳ್ಳ ದಾಟಿ ಬೇಡ್ತಿ ನದಿಯಲ್ಲಿ ಮೀನು ಹಿಡಿಯಲು ಹೋಗಿದ್ದರು.
ಮೀನು ಹಿಡಿದು ಮರಳಿ ಬರುವಾಗ ಕವಲಗಿ ಹಳ್ಳದಲ್ಲಿ ಒಮ್ಮಿಂದೊಮ್ಮೆಲೇ ನೀರಿನ ಪ್ರಮಾಣ ಹೆಚ್ಚಾಗಿ ಇಬ್ಬರೂ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ಶೋಧಕ್ಕೆ ಕ್ರಮ ಕೈಗೊಂಡಿದ್ದಾರೆ.