ಯಲ್ಲಾಪುರ ತಾಲೂಕಿನ ಕೆರೆಹೊಸಳ್ಳಿ ಸಮೀಪದ ಕವಲಗಿ ಹಳ್ಳದಲ್ಲಿ ಮುಳುಗಿದ ಸಹೋದರರ ಪತ್ತೆ ಕಾರ್ಯಾಚರಣೆಯನ್ನು ಪೊಲೀಸ್ ಹಾಗೂ ಅಗ್ನಿಶಾಮದ ದಳದವರು ಜಂಟಿಯಾಗಿ ಮಾಡುತ್ತಿದ್ದಾರೆ.
ಘಟನೆ ಸಂಜೆ 6 ಗಂಟೆಯ ಹೊತ್ತಿಗೆ ನಡೆದಿದ್ದು, ಕಾಣೆಯಾದ ಸಹೋದರರ ಜತೆ ಬಂದಿದ್ದ ಅವರ ತಂದೆ ಹಾಗೂ ಇನ್ನುಳಿದವರು ಹಳ್ಳ ದಾಟಿಕೊಂಡು ಬಂದು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶೋಧ ಕಾರ್ಯ ಆರಂಭಿಸಿದ್ದರು.
2-3 ತಾಸುಗಟ್ಟಲೆ ಶೋಧ ನಡೆಸಿದರೂ ಇಬ್ಬರೂ ಪತ್ತೆಯಾಗಿಲ್ಲ.
ರಾತ್ರಿಯಾಗಿರುವ ಕಾರಣ ಇದೀಗ ಶೋಧ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಕಾಣೆಯಾದ ಇಬ್ಬರಿಗಾಗಿ ಸೋಮವಾರ ಬೆಳಗ್ಗೆ ಮತ್ತೆ ಶೋಧ ಮುಂದುವರಿಸಲಾಗುವುದೆಂದು ಅಧಿಕಾರಿಗಳು ತಿಳಿಸಿದ್ದಾರೆ.