ಎರಡು ಲಾರಿಗಳ ನಡುವೆ ಅಪಘಾತ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಯಲ್ಲಾಪುರ ತಾಲೂಕಿನ ಅರಬೈಲ್ ಘಟ್ಟದಲ್ಲಿ ನಡೆದಿದೆ.
ಲಾರಿಯ ಚಾಲಕ ಬೆಳಗಾವಿಯ ಸವದತ್ತಿಯ ಪ್ರಕಾಶ ಮಹಾದೇವ ಶೆಟ್ಟಪ್ಪನವರ್ ಗಾಯಗೊಂಡ ವ್ಯಕ್ತಿ. ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆಗೆ ಹೋಗುತ್ತಿದ್ದ ಲಾರಿ, ಮಂಗಳೂರು ಕಡೆಗೆ ಹೊರಟಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಸಿಮೆಂಟ್ ತುಂಬಿದ ಲಾರಿಯ ಎರಡೂ ಟಯರ್ ಗಳು ಬ್ಲಾಸ್ಟ್ ಆಗಿವೆ. ಲಾರಿ ಪಲ್ಟಿಯಾಗಿ ಸಿಮೆಂಟ್ ಚೀಲಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಗಾಯಾಳುಗಳನ್ನು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಅಪಘಾತದಿಂದಾಗಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಯಿತು. ಪೊಲೀಸರು ಸ್ಥಳಕ್ಕೆ ಬಂದು, ಪಲ್ಟಿಯಾದ ಲಾರಿಯ ತೆರವಿಗೆ ಕ್ರಮ ಕೈಗೊಂಡು, ವಾಹನಗಳ ಸಂಚಾರ ಸುಗಮಗೊಳಿಸಿದರು. ಡಿಕ್ಕಿ ಹೊಡೆದ ಲಾರಿಯ ಚಾಲಕ ಬೆಳಗಾವಿಯ ರಾಮದುರ್ಗದ ಶಿವಾನಂದ ನವನಕ್ಕಿ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.