ಗ್ಯಾಸ್ ಸಿಲಿಂಡರ್ ಸಾಗಿಸುತ್ತಿದ್ದ ಬುಲೆರೊಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದು ಸವಾರ ಸಾವನ್ನಪ್ಪಿದ ಘಟನೆ ಯಲ್ಲಾಪುರ ತಾಲೂಕಿನ ಉಮ್ಮಚಗಿ-ಮಾವಿನಕಟ್ಟಾ ರಸ್ತೆಯ ಸಂಕದಗುಂಡಿ ಕ್ರಾಸ್ ಬಳಿ ನಡೆದಿದೆ.
ಉಮ್ಮಚಗಿಯ ಚಿಕನ್ ಶಾಪ್ ಮಾಲೀಕ ಸತ್ಯನಾರಾಯಣ ಮಂಜುನಾಥ ನಾಯ್ಕ (25) ಮೃತ ವ್ಯಕ್ತಿ. ಈತ ಶಶಿಧರ ಸಿದ್ದಿ ಅವರೊಂದಿಗೆ ಉಮ್ಮಚಗಿಯಿಂದ ಭರಣಿಗೆ ಬೈಕ್ ಮೇಲೆ ಹೋಗುವಾಗ ಮುಂದಿನಿಂದ ಹೋಗುತ್ತಿದ್ದ ಬುಲೆರೊಗೆ ಡಿಕ್ಕಿ ಹೊಡೆದಿದ್ದಾನೆ.
ಗಾಯಗೊಂಡ ಸವಾರನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದಾನೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.