ಜಿಲ್ಲೆಯಲ್ಲಿ ಅನಧಿಕೃತ ಲಾಟರಿ ಮತ್ತು ಮಟ್ಕಾ ಹಾವಳಿ ಹಾಗೂ ಬೆಟ್ಟಿಂಗ್ ಪ್ರಕರಣಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್ ಹೇಳಿದರು.
ಅವರು ಮಂಗಳವಾರ ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅನಧಿಕೃತ ಲಾಟರಿ ಹಾಗೂ ಮಟ್ಕಾ ಹಾವಳಿ ನಿಯಂತ್ರಣ ಪ್ಲೆಯಿಂಗ್ ಸ್ಕ್ವಾಡ್‌ನ 2025-26 ನೇ ಸಾಲಿನ ಮೊದಲನೇ ತ್ರೈಮಾಸಿಕ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಪ್ರಸಕ್ತ ತ್ರೈಮಾಸಿಕದಲ್ಲಿ ಒಟ್ಟು 86 ಮಟ್ಕಾ ಪ್ರಕರಣಗಳಲ್ಲಿ 101 ಆರೋಪಿಗಳ ಮೇಲೆ ಪ್ರಕರಣ ದಾಖಲಿಸಿದ್ದು, ಜಿಲ್ಲೆಯನ್ನು ಸಂಪೂರ್ಣ ಅನಧಿಕೃತ ಲಾಟರಿ/ಮಟ್ಕಾ ಹಾವಳಿ ಮುಕ್ತ ವಲಯವನ್ನಾಗಿ ಮಾಡಲು ಪ್ಲೆಯಿಂಗ್ ಸ್ಕ್ವಾಡ್‌ನ ಸದಸ್ಯರು ಅಗತ್ಯ ಕ್ರಮ ಕೈಗೊಳ್ಳಬೇಕು.
ಅನಧಿಕೃತ ಲಾಟರಿ ಮತ್ತು ಮಟ್ಕಾ ಹಾವಳಿ ಹಾಗೂ ಬೆಟ್ಟಿಂಗ್ ಪ್ರಕರಣಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ವತಿಯಿಂದ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಸಾಜಿದ ಅಹ್ಮದ ಮುಲ್ಲಾ, ಎ.ಎಸ್.ಪಿ ಕೃಷ್ಣಮೂರ್ತಿ, ವಾಣಿಜ್ಯ ತೆರಿಗೆ ಅಧಿಕಾರಿ ಷಣ್ಮುಗಪ್ಪ ನರೇಗಲ್, ಪ್ಲೆಯಿಂಗ್ ಸ್ಕ್ವಾಡ್‌ನ ಸದಸ್ಯ ಸಮಾವೇಶಕ ಹಾಗೂ ಪಿಂಚಣಿ ಇಲಾಖೆಯ ಸಹಾಯಕ ನಿರ್ದೇಶಕ ಗಣೇಶ ಪಟಗಾರ, ಅಭಿವೃದ್ಧಿ ಅಧಿಕಾರಿ ಕಾಶಿಮಸಾಬ ಮುಲ್ಲಾ, ಶೋಲಿನ್ ಡಿ ಕೋಸ್ಟಾ ಉಪಸ್ಥಿತರಿದ್ದರು.