ಯಲ್ಲಾಪುರ ತಾಲೂಕಿನ ಕವಲಗಿಹಳ್ಳದಲ್ಲಿ ನಾಲ್ಕನೇ ದಿನದ ಕಾರ್ಯಾಚರಣೆ ವೇಳೆ ಮಹಮ್ಮದ್ ಹನೀಫ್ ಶವವಾಗಿ ಪತ್ತೆಯಾಗಿದ್ದಾನೆ. ಮುಳುಗಿದ ಸ್ಥಳದಿಂದ ಒಂದೂವರೆ ಕಿಮೀ ದೂರದಲ್ಲಿ ಶವ ಪತ್ತೆಯಾಗಿದೆ.
ಮಾದನಸರದ ಎಂಟು ಜನ ಕವಲಗಿ ಹಳ್ಳ ದಾಟಿ ಬೇಡ್ತಿ ನದಿಗೆ ಮೀನು ಹಿಡಿಯಲು ಕಳೆದ ಭಾನುವಾರ ಹೋಗಿದ್ದರು. ಮೀನು ಹಿಡಿದು ಬರುತ್ತಿರುವಾಗ ಕವಲಗಿ ಹಳ್ಳದಲ್ಲಿ ಒಮ್ಮೆಲೆ ನೀರು ಹೆಚ್ಚಾಗಿ ಮಹಮ್ಮದ ರಫೀಕ್ ಇಬ್ರಾಹಿಂ ಸಾಬ್ ಸೈಯದ್ ಹಾಗೂ ಆತನ ಸಹೋದರ ಮಹಮ್ಮದ್ ಹನೀಫ್ ಇಬ್ರಾಹಿಂ ಸಾಬ್ ಸೈಯ್ಯದ್ ಹಳ್ಳದಲ್ಲಿ ಮುಳಗಿ ಕಾಣೆಯಾಗಿದ್ದರು.
ಕಾಣೆಯಾದ ಇಬ್ಬರ ಪೈಕಿ ಮಹಮ್ಮದ್ ರಫಿಕ್ ಇಬ್ರಾಹಿಂ ಸಾಬ್ ಸೈಯ್ಯದ್ ಸೋಮವಾರ ಶವವಾಗಿ ದೊರೆತಿದ್ದ. ಹನೀಫ್ ಗಾಗಿ ತೀವ್ರ ಹುಡುಕಾಟ ನಡೆಸಲಾಗುತ್ತಿತ್ತು. ನಾಲ್ಕನೇ ದಿನದ ಕಾರ್ಯಾಚರಣೆಯಲ್ಲಿ ಮುಳುಗಿದ ಸ್ಥಳದಿಂದ ಒಂದು ಕಿ.ಮೀ ದೂರದಲ್ಲಿ ಶವ ದೊರೆತಿದೆ.
ಆಗಾಗ ಸುರಿಯುವ ಮಳೆ, ರಾಡಿ ಮಣ್ಣಿನಿಂದ ಅಡಚಣಿ ಉಂಟಾದರೂ ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳೀಯರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ, ಶವ ಹುಡುಕುವಲ್ಲಿ ಯಶಸ್ವಿಯಾಗಿದ್ದಾರೆ.