ಬೆಂಗಳೂರಿನ ಅಂತರಂಗ ಪ್ರತಿಷ್ಠಾನದಿಂದ ಪ್ರೇರಣಾ ಮಾಸದ ಸರಣಿ ಕಾರ್ಯಕ್ರಮವಾಗಿ ‘ರಾಷ್ಟ್ರ ನಮನ’ ದೇಶಭಕ್ತಿ ಗೀತೆ ರಚನೆ ಮತ್ತು ಗಾಯನ ಸ್ಪರ್ಧೆ ಆಯೋಜಿಸಲಾಗಿದೆ.
ಗೀತೆ ಸ್ವತಂತ್ರ ರಚನೆಯಾಗಿರಬೇಕು. ಯಾವುದೇ ರೀತಿಯಲ್ಲಿ ನಕಲು ಮಾಡುವಂತಿಲ್ಲ. ಯಾವುದೇ ಗಾಯಕರಿಂದ ರಾಗ ಸಂಯೋಜನೆ ಮಾಡಿಸಿ, ಹಾಡಿಸಬಹುದು. ಹಾಡಿದ ಆಡಿಯೊವನ್ನು ತಮಗಿಷ್ಟ ಬಂದಂತೆ ದೇಶಭಕ್ತಿ ಹೆಚ್ಚುವ ರೀತಿಯಲ್ಲಿ ವಿಡಿಯೊ ಜೋಡಣೆ ಮಾಡಿ ಕಳುಹಿಸಬೇಕು. ಹಾಡಿಗೆ ತಗುಲುವ ವೆಚ್ಚವನ್ನು ಅವರೇ ಭರಿಸಬೇಕು.
ಒಬ್ಬ ಕವಿ ಮೂರು ರಚನೆಗಳನ್ನು ಕಳುಹಿಸಬಹುದು. ಆಯ್ದ 10 ಕವನಗಳಿಗೆ ವಿಶೇಷ ಪಾರಿತೋಷಕ ನೀಡಲಾಗುವುದು. ಅತ್ಯುತ್ತಮ 60 ಕವನಗಳನ್ನು ದೇಶಭಕ್ತಿಗೀತೆಯ ಸಂಕಲನದಲ್ಲಿ ಪ್ರಕಟಿಸಲಾಗುವುದು. ಪುಸ್ತಕವನ್ನು ರಾಜ್ಯದ ಎಲ್ಲಾ ಸಂಗೀತ ಶಾಲೆಗಳಿಗೆ ತಲುಪಿಸುವ ಗುರಿ ಹೊಂದಲಾಗಿದೆ.
ಮೊದಲ ಸುತ್ತಿನಲ್ಲಿ ಆಯ್ಕೆಯಾದ ಗೀತೆಗಳನ್ನು ಅಂತರಂಗ ಫೇಸಬುಕ್ ಪೇಜ್ ನಲ್ಲಿ ಪ್ರಕಟಿಸಲಾಗುವುದು. ಅಲ್ಲಿ ಬರುವ ಲೈಕ್ ಹಾಗೂ ಕಮೆಂಟ್ ಗಳನ್ನೂ ಆಯ್ಕೆಯಲ್ಲಿ ಪರಿಗಣಿಸಲಾಗುವುದು. ಮೂರು ಜನ ಖ್ಯಾತ ಕವಿ, ಗಾಯಕರು ಹಾಗೂ ಚಿತ್ರ ಸಂಕಲನ ಪರಿಶೀಲಕರು ನಿರ್ಣಾಯಕರಾಗಿರುತ್ತಾರೆ. ನಿರ್ಣಾಯಕರ ತೀರ್ಮಾನವೇ ಅಂತಿಮವಾಗಿರುತ್ತದೆ.
ಗೀತೆಗಳನ್ನು ಸಾಹಿತ್ಯ ರಚನೆಕಾರರು, ಗಾಯಕರು ಹಾಗೂ ವಿಡಿಯೊ ರಚನೆಕಾರರ ವಿವರದೊಂದಿಗೆ ಆಗಸ್ಟ್ 31 ರ ಒಳಗೆ ಕಳುಹಿಸಬೇಕು. ಗೀತೆಗಳನ್ನು 8073373514 ವಾಟ್ಸಪ್ ನಂಬರ್ ಗೆ ಅಥವಾ antarangapratishthana@gmail.com ಗೆ ಕಳುಹಿಸಬೇಕು.