ಯಲ್ಲಾಪುರದ ನಾಯಕನಕೆರೆ ಹಾಗೂ ಹುಣಶೆಟ್ಟಿಕೊಪ್ಪದ ಬೆಳಕೊಪ್ಪದಲ್ಲಿ ಯಾವುದೇ ಅನುಮತಿ ಇಲ್ಲದೇ ಸಾರಾಯಿ ಕುಡಿಯಲು ಅವಕಾಶ ಮಾಡಿಕೊಟ್ಟ ಎರಡು ಅಂಗಡಿಗಳ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಒಟ್ಟು 330 ರೂ ಮೌಲ್ಯದ ಮದ್ಯ ವಶಪಡಿಸಿಕೊಳ್ಳಲಾಗಿದೆ.
ನಾಯಕನಕೆರೆಯ ತನ್ನ ಫಾಸ್ಟ್ ಫುಡ್ ಅಂಗಡಿಯಲ್ಲಿ ಜನರಿಗೆ ಸಾರಾಯಿ ಕುಡಿಯಲು ಅವಕಾಶ ನೀಡಿದ್ದು, ಪೊಲೀಸರು ದಾಳಿ ನಡೆಸಿ, 230 ರೂ ಮೌಲ್ಯದ ಎರಡು ವಿಸ್ಕಿ ಪೌಚ್ ಗಳನ್ನು ವಶಪಡಿಸಿಕೊಂಡರು.
ಹುಣಶೆಟ್ಟಿಕೊಪ್ಪದ ಬೆಳಕೊಪ್ಪ ಗ್ರಾಮದಲ್ಲಿ ಕಿರಣ ಮರಾಠಿ ಎಂಬವರು ತಮ್ಮ ತಾತ್ಕಾಲಿಕ ಶೆಡ್ ನಲ್ಲಿ ಸಾರ್ವಜನಿಕರಿಗೆ ಕುಡಿಯಲು ಅವಕಾಶ ಕೊಟ್ಟಿದ್ದರು. ದಾಳಿ ನಡೆಸಿದ ಪೊಲೀಸರು 100 ರೂ ಮೌಲ್ಯದ ಎರಡು ವಿಸ್ಕಿ ಪೌಚ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಎರಡೂ ಕಡೆಗಳಲ್ಲಿ ಒಂದಷ್ಟು ಖಾಲಿ ಗ್ಲಾಸ್ ಗಳು, ಖಾಲಿ ಪೌಚ್ ಗಳೂ ಸಿಕ್ಕಿವೆ. ಈ ಕುರಿತು ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.