`ಸರ್ಕಾರಿ ಇಲಾಖೆಗಳಿಗೆ ಹೊಸ ಕಟ್ಟಡ ನಿರ್ಮಿಸುವ ಬದಲು ಅದೇ ಹಣದಲ್ಲಿ ಶಾಲೆ, ಅಂಗನವಾಡಿ, ಆಸ್ಪತ್ರೆ ಹಾಗೂ ಹಾಸ್ಟೇಲ್’ಗಳಿಗೆ ಅಗತ್ಯವಿರುವ ಮೂಲಭೂತ ಸೌಕರ್ಯ ಒದಗಿಸಬೇಕು’ ಎಂದು ಉತ್ತರ ಕನ್ನಡ ಉಸ್ತುವಾರಿ ಕಾರ್ಯದರ್ಶಿಯೂ ಆಗಿರುವ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ ಸಭೆಯಲ್ಲಿ ಮಾತನಾಡಿದ ಅವರು ಈ ವರ್ಷದ ಕ್ರಿಯಾ ಯೋಜನೆಯಲ್ಲಿ ರೂಪಿಸಿರುವ ಎಲ್ಲಾ ಕಾರ್ಯಕ್ರಮಗಳನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಿ ಯೋಜನೆಯ ಸಂಪೂರ್ಣ ಗುರಿ ಸಾಧಿಸುವಂತೆ ಅವರು ಸೂಚನೆ ನೀಡಿದರು. ಈ ವೇಳೆ ಉತ್ತರ ಕನ್ನಡ ಜಿಲ್ಲಾ ಪಂಚಾಯತ್’ಗೆ 2024-25 ನೇ ಸಾಲಿನಲ್ಲಿ ಲಿಂಕ್ ಡಾಕ್ಯುಮೆಂಟ್’ರಡಿ ಅಧೀನ ಇಲಾಖೆಗಳಿಗೆ ಹಂಚಿಕೆಯಾದ 350.58 ಕೋಟಿ ರೂ ಮೊತ್ತದ ಕ್ರಿಯಾಯೋಜನೆಗೆ ಅನುಮೋಧನೆ ನೀಡಿದರು.
ಅಧೀನ ಇಲಾಖೆಗಳಲ್ಲಿ 4011.05 ಲಕ್ಷ ರೂ ವೆಚ್ಚದಲ್ಲಿ ಫಲಾನುಭವಿ ಕಾರ್ಯಕ್ರಮಗಳು, 26810.88 ಲಕ್ಷ ರೂ ವೆಚ್ಚದಲ್ಲಿ ವೇತನ ಹಾಗೂ ಹೊರಗುತ್ತಿಗೆ, ದಿನಗೂಲಿ ಸಿಬ್ಬಂದಿ ವೇತನ ಮತ್ತು ಕಚೇರಿ ವೆಚ್ಚ, 1421.99 ಲಕ್ಷ ರೂ ಮೊತ್ತದಲ್ಲಿ ವಿವಿಧ ಅಭಿವೃಧ್ದಿ ಕಾಮಗಾರಿಗಳು ಹಾಗೂ 1014.13 ಲಕ್ಷ ರೂ ವೆಚ್ಚದಲ್ಲಿ ಇತರೇ ಕಾರ್ಯಕ್ರಮಗಳು ಸೇರಿ ಒಟ್ಟು 35058.05 ಲಕ್ಷ ರೂ ಮೌಲ್ಯದ ಕಾಮಗಾರಿಗಳಿಗೆ ಕ್ರಿಯಾ ಯೋಜನೆ ರೂಪಿಸಲಾಗಿದೆ.
Discussion about this post