6

ವಿಕಾಸ ಬ್ಯಾಂಕ್ ಗೆ 1.27 ಕೋಟಿ ರೂ ಲಾಭ

ಯಲ್ಲಾಪುರದ ವಿಕಾಸ ಅರ್ಬನ್ ಕೊ ಅಪರೇಟಿವ್ ಬ್ಯಾಂಕ್ ಯಶಸ್ವಿಯಾಗಿ 28 ವರ್ಷ ಪೂರೈಸಿ 29 ನೇ ವರ್ಷಕ್ಕೆ ಕಾಲಿರಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ 1.27 ಕೋಟಿ ರೂ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್ ಅಧ್ಯಕ್ಷ ಮುರಳಿ ಹೆಗಡೆ ಹೇಳಿದರು.

ಅವರು ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿ, ಬ್ಯಾಂಕು 10,853 ಸದಸ್ಯರನ್ನು ಹೊಂದಿದ್ದು, ಕಳೆದ ಸಾಲಿಗಿಂತ ಶೇ 3.03 ಪ್ರಮಾಣದ ಹೆಚ್ಚಳ ಸಾಧಿಸಿದೆ. ಸಾಲ ಮತ್ತು‌ ಮುಂಗಡಗಳು ಕಳೆದ ಸಾಲಿಗಿಂತ ಶೇ 5.23 ಪ್ರಮಾಣದ ಹೆಚ್ಚಳ ಸಾಧಿಸಿದೆ. ಗುಂತಾವಣೆಗಳು ಹಾಗೂ ದುಡಿಯುವ ಬಂಡವಾಳದಲ್ಲೂ ಕಳೆದ ಸಾಲಿಗಿಂತ 3.99 ಹೆಚ್ಚಳ ಸಾಧಿಸಿದೆ.

ಸಾಲ ವಸೂಲಾತಿ ಪ್ರಮಾಣ ಶೇ 92.22 ರಷ್ಟಾಗಿದೆ. ಸದಸ್ಯರ ಶೇರು ಹಣಕ್ಕೆ ಶೇ 6 ಡಿವಿಡೆಂಡ್ ನೀಡಲು ಆಡಳಿತ ಮಂಡಳಿ ತಿರ್ಮಾನಿಸಿದೆ. ರಿಸರ್ವ್ ಬ್ಯಾಂಕ್ ಮಾನದಂಡದಂತೆ ಕೋರ್ ಬ್ಯಾಂಕಿಂಗ್ ಸಾಪ್ಟ್ ವೇರ್ ಅಳವಡಿಸಲಾಗಿದೆ. ಬ್ಯಾಂಕಿನ ಮೂರು ಶಾಖೆಗಳಲ್ಲಿ ಆನ್ ಲೈನ್ ಬ್ಯಾಂಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಅವಶ್ಯವಿರುವ ಯುಟಿಲಿಟಿ ತತ್ರಾಂಶ ಅಳವಡಿಸಲು ನಿರ್ಧರಿಸಿದ್ದೇವೆ. ಎಟಿಎಂ, ಸಿಡಿಎಂ, ಇ ಕಾಮರ್ಸ್, ಪಿಓ ಎಸ್ ಮೊಬೈಲ್ ಬ್ಯಾಂಕಿಂಗ್ ಮುಂತಾದ ಡಿಜಿಟಲ್ ಸೇವೆ ನೀಡಲಾಗುತ್ತಿದೆ. ಯುಪಿಐ ಸೇವೆ ನೀಡಲು ತಂತ್ರಜ್ಞಾನ ಅಭಿವೃದ್ದಿ ಮಾಡಲಾಗುತ್ತಿದ್ದು ಶೀಘ್ರದಲ್ಲೇ ಆರಂಭವಾಗಲಿದೆ ಎಂದರು.

ಬ್ಯಾಂಕಿನ ವಾರ್ಷಿಕ ಸರ್ವಸಾಧಾರಣ ಸಭೆ ಅ.25 ರಂದು ಮಧ್ಯಾಹ್ನ 3.30 ಪಟ್ಟಣದ ಅಡಿಕೆ ಭವನದಲ್ಲಿ ನಡೆಯಲಿದೆ ಎಂದರು. ಬ್ಯಾಂಕಿನ ಉಪಾಧ್ಯಕ್ಷ ನರಸಿಂಹ ಬೋಳಪಾಲ್, ವ್ಯವಸ್ಥಾಪಕ ನಿರ್ದೇಶಕ ಉಮೇಶ ಭಾಗ್ವತ್, ನಿರ್ದೇಶಕರಾದ ಎಸ್ ಎಂ ಭಟ್ಟ ಬಾಗಿನಕಟ್ಟಾ, ಎಸ್ ಕೆ ಭಾಗ್ವತ್, ಪ್ರಿಯಾ ಗಾಂವ್ಕಾರ ಇದ್ದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page