6

ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿದ ದಶಮ ಶ್ರಾವಣ ಯಕ್ಷ ಸಂಭ್ರಮ

ಯಲ್ಲಾಪುರ ಕಾರ್ಮಿಕ ಭವನದಲ್ಲಿ ಶ್ರಾವಣ ಯಕ್ಷ ಸಂಭ್ರಮದ ದಶಮಾನೋತ್ಸವ ಯಶಸ್ವಿಯಾಗಿ ನಡೆಯಿತು. ನಿರಂಂತರ 12 ತಾಸುಗಲಕ ಕಾಲ‌ ನಡೆದ ಕಾರ್ಯಕ್ರಮ ಕಲಾಭಿಮಾನಿಗಳ ಮೆಚ್ಚುಗೆ ಗಳಿಸಿತು.

ಸಂಜೆ 6 ರಿಂದ ಬೆಳಗ್ಗೆ 6 ರವರೆಗೆ ನಿರಂತರವಾಗಿ 12 ತಾಸುಗಳ ಕಾಲ ರತ್ನಾವತಿ ಕಲ್ಯಾಣ, ಊರ್ವಶಿ ಶಾಪ, ಮಾರುತಿ ಪ್ರತಾಪ, ಮಾರಣಾಧ್ವರ ಯಕ್ಷಗಾನ ಪ್ರಸಂಗಗಳು ಪ್ರದರ್ಶನಗೊಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು. ದಕ್ಷಿಣೋತ್ತರಕನ್ನಡ ಜಿಲ್ಲೆಯ 40 ಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು.

ತೆಂಕು-ಬಡಗುಗಳೆರಡರಲ್ಲೂ ಭಾಗವತಿಕೆಯಲ್ಲಿ ಪರಿಣಿತರಾಗಿರುವ ದಿನೇಶ ಭಟ್ಟ ಯಲ್ಲಾಪುರ ಅವರನ್ನು ಸನ್ಮಾನಿಸಲಾಯಿತು. ಕಲಾವಿದ ಭಾಸ್ಕರ ಗಾಂವ್ಕರ ಬಿದ್ರೆಮನೆ ಅಭಿನಂದನಾ ನುಡಿಗಳನ್ನಾಡಿದರು.
ದಶಮಾನೋತ್ಸವದ ಅಂಗವಾಗಿ ಯಕ್ಷಗಾನದ ವಿವಿಧ ವಿಭಾಗಗಳ 10 ಜನರಿಗೆ ಗೌರವ ಸಮರ್ಪಣೆ ನಡೆಯಿತು. ಸಂಘಟಕರಾದ ಸುಬ್ರಾಯ ಹೆಗಡೆ ಮಳಗಿಮನೆ, ಎನ್.ಎಸ್.ಭಟ್ಟ ನಂದೊಳ್ಳಿ, ಯುವ ಕಲಾವಿದರಾದ ದೀಪಕ ಭಟ್ಟ ಕುಂಕಿ, ಶ್ರೀಧರ ಅಣಲಗಾರ, ಯಕ್ಷಗಾನಕ್ಕೆ ಪೂರಕ ವ್ಯವಸ್ಥೆ ನೀಡುವ ನಾರಾಯಣ ಭಟ್ಟ ಸುಣಜೋಗ, ನರಸಿಂಹ ಭಟ್ಟ, ಕಲಾ ಪೋಷಕರಾದ ಮಹಾಬಲೇಶ್ವರ ಭಟ್ಟ ಗೋಪಿನಪಾಲ, ಶಿವರಾಮ ಹೆಗಡೆ ಕಳಚೆ, ಪ್ರವೀಣ ಹೆಗಡೆ ಬಾಳೆಹಳ್ಳಿ, ನರಸಿಂಹ ಹೆಗಡೆ ಚಿನ್ಮನೆ, ಪ್ರಭಾವತಿ ಹೆಗಡೆ ಅವರನ್ನು ಗೌರವಿಸಲಾಯಿತು.

ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ, ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಆರ್.ಎಸ್.ಭಟ್ಟ, ಅಡಕೆ ವ್ಯವಹಾರಸ್ಥರ ಸಂಘದ ಅಧ್ಯಕ್ಷ ಆರ್.ವಿ.ಹೆಗಡೆ ಇತರರಿದ್ದರು.

ಸಂಘಟನೆಯ ಪ್ರಮುಖರಾದ ಸುಬ್ಬಣ್ಣ ಕಂಚಗಲ್, ರಾಘವೇಂದ್ರ ಬೆಳಸೂರು, ಎಂ.ಆರ್.ಭಟ್ಟ ವಡ್ರಮನೆ, ಶ್ಯಾಮ ಆಚಾರಿ, ನರಸಿಂಹ ಭಟ್ಟ, ರಾಮಕೃಷ್ಣ ಭಟ್ಟ, ಮಂಜುನಾಥ ಕಂಚಗಲ್, ರಾಮಕೃಷ್ಣ ಭಟ್ಟ ಬಾರೆ, ಮಂಜುನಾಥ ಭಟ್ಟ ದೇವದಮನೆ, ಗೋಪಾಲ ಕಂಚಗಲ್, ಗಣಪತಿ ಭಟ್ಟ ಕಂಚಗಲ್, ಎಂ.ಆರ್.ಭಟ್ಟ ಬೆಳಶೇರು, ಸದಾಶಿವ ಚಿಕ್ಕೊತ್ತಿ, ಶಿವರಾಮ ಭಟ್ಟ ಕಂಚಗಲ್ ಇತರರಿದ್ದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page