ಯಲ್ಲಾಪುರ ತಾಲೂಕಿನ ಬಿಳಕಿಯಲ್ಲಿ ಮೇಯಲು ಹೋದ ಹೋರಿಯೊಂದು, ಶವವಾಗಿ ಪತ್ತೆಯಾಗಿದೆ. ಕೇವಲ ಮುಖದ ಭಾಗ ತುಂಡಾಗಿ ಬಿದ್ದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಯಾರೋ ಕೊಂದಿರುವ ಶಂಕೆ ವ್ಯಕ್ತವಾಗಿದೆ.
ಬಿಳಕಿಯ ಚಂದ್ರಿಕಾ ಲಿಂಗಪ್ಪ ನಾಯ್ಕ ಅವರಿಗೆ ಸೇರಿದ ಹೋರಿಯನ್ನು ಆಗಸ್ಟ್ 28 ರಂದು ಎರಡು ಆಕಳ ಜೊತೆಗೆ ಮೇಯಲು ಕಾಡಿಗೆ ಬಿಟ್ಟಿದ್ದರು. ಸಂಜೆ ಎರಡು ಆಕಳುಗಳು ಮಾತ್ರ ಕೊಟ್ಟಿಗೆಗೆ ಬಂದಿವೆ.
ಮಾರನೇ ದಿನ ಊರಿನವರ ಜೊತೆ ಸೇರಿ ಕಾಡಿನಲ್ಲಿ ಹುಡುಕಿದಾಗ ಕಪ್ಪು ಬಣ್ಣದ ಹೋರಿಯ ಮುಖವು ತುಂಡಾಗಿ ಬಿದ್ದಿದ್ದು,ವಹೋರಿಯ ಚರ್ಮದ ಭಾಗವು ಮಾತ್ರ ಇರುವುದು ಕಂಡು ಬಂದಿದೆ.
ಎಂಟು ಸಾವಿರೂ ಮೌಲ್ಯದ ಮೂರು ವರ್ಷದ ಹೋರಿಯನ್ನು ಯಾವುದೋ ಪ್ರಾಣಿಗಳು ತಿಂದಿರಬಹುದು ಅಥವಾ ಯಾರೋ ಕೊಂದಿರುವ ಸಂಶಯವಿದೆ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯಲ್ಲಾಪುರ ಠಾಣೆಯಲ್ಲಿ ದೂರಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.







