6

ಪೊಲೀಸ್ ಠಾಣೆ ಮೆಟ್ಟಿಲೇರಿದ ಗಣೇಶೋತ್ಸವದ ಗಲಾಟೆ

ಯಲ್ಲಾಪುರ ತಾಲೂಕಿನ ಇಡಗುಂದಿ ಗಣೇಶೋತ್ಸವದ ಆರ್ಕೆಸ್ಟ್ರಾ ನಡೆಯುತ್ತಿದ್ದ ವೇಳೆ ಗಲಾಟೆ, ಹಲ್ಲೆ ನಡೆದಿದ್ದು ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮಾಡಿ ಇಬ್ಬರ ಮೇಲೆ ಹಲ್ಲೆ ನಡೆಸಿದ ಏಳು ಜನರ ವಿರುದ್ದ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರ್ಕೆಜಡ್ಡಿಯ ವಿನೋದ ವಿಷ್ಣು ನಾಯ್ಕ, ಇಡಗುಂದಿಯ ಮಾರುತಿ ದೊಟ್ಟಯ್ಯ ನಾಯ್ಕ, ಉದಯ ಮೇಸ್ತ, ವಸಂತ ಮಾಣಿ ನಾಯ್ಕ, ವಿಘ್ನೇಶ್ ನಾಯ್ಕ, ಅಣ್ಣಪ್ಪ ರಾಯ್ಕರ್, ಸಂತೋಷ ಮಾಣಿ ನಾಯ್ಕ ಎಂಬವರು ಗಂಗಾಧರ ಅನಂತ ನಾಯ್ಕ ಹಾಗೂ ಮಂಜುನಾಥ ಹನುಮಂತಪ್ಪ ವಡ್ಡರ್ ಎಂಬವರ ಮೇಲೆ ಹಲ್ಲೆ ನಡೆಸಿದ್ದಾರೆ.

ಸ್ಥಳೀಯ ಸಾರ್ವಜನಿಕ ಗಜಾನನೋತ್ಸವದ ಎದುರು ಆರ್ಕೆಸ್ಟ್ರಾ ನಡೆಯುತ್ತಿದ್ದ ವೇಳೆ ಮಂಜುನಾಥ ಹನುಮಂತಪ್ಪ ವಡ್ಡರ್ ಈತನು ಗಲಾಟೆ ಮಾಡುತ್ತಿದ್ದ. ಆ ವೇಳೆ ಅವರನ್ನು ತಡೆಯಲು ಮುಂದಾದ ಗಂಗಾಧರ ನಾಯ್ಕ ಮುಂದಾದರು. ಆದರೆ ಆತ ಹೊಡೆದು ದೂಡಾಡಿಕೊಂಡು ತಪ್ಪಿಸಿಕೊಂಡು ಹೊರಟಾಗ ಏಳು ಜನ ಆರೋಪಿಗಳು ಸೇರಿ, ಅಡ್ಡಗಟ್ಟಿ, ಹೊಡೆದು ಕೆಳಗೆ ಬೀಳಿಸಿ, ಎದೆಯ ಮೇಲೆ ತುಳಿದು ಗಾಯಗೊಳಿಸಿದ್ದಾರೆ.

ಜ್ಯೋತಿ ಮಂಜುನಾಥ ಅಸ್ನೋಟಿಕರ್,ಮನೋಜ ಗೌಡ ಬಂದು ಹಲ್ಲೆಯನ್ನು ತಪ್ಪಿಸಿದ್ದಾರೆ. ಆರೋಪಿಗಳ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page