6

ಕಳಚೆಯ ಸಹ್ಯಾದ್ರಿ ಸಹಕಾರಿ ಸಂಘಕ್ಕೆ 50.39 ಲಕ್ಷ ರೂ ಲಾಭ: ಉಮೇಶ ಭಾಗ್ವತ ಮಾಹಿತಿ

 ಕಳೆದ ಆರ್ಥಿಕ ಸಾಲಿನಲ್ಲಿ ಸಂಘವು 50.39 ಲಕ್ಷ ರೂ
ಲಾಭ ಗಳಿಸಿದೆ ಎಂದು ಕಳಚೆಯ ಸಹ್ಯಾದ್ರಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮೇಶ ಭಾಗ್ವತ ಹೇಳಿದರು.
    ಅವರು ಯಲ್ಲಾಪುರದ ಎಪಿಎಂಸಿ ಶಾಖೆಯಲ್ಲಿ ಸಂಘದ ಬೆಳವಣಿಗೆಯ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಕಳೆದ ವರ್ಷಕ್ಕಿಂತ ಹತ್ತು ಲಕ್ಷರೂ ಹೆಚ್ಚಿನ ಲಾಭ ಆಗಿದೆ. ಕಳೆದ ನಾಲ್ಕು ವರ್ಷಗಳಿಂದ ಎಪಿಎಂಸಿಯ ಶಾಖೆಯಲ್ಲಿ ಅಡಿಕೆ, ಕಾಳುಮೆಣಸು ವ್ಯಾಪಾರ ಪ್ರಾರಂಭಿಸಲಾಗಿದೆ.
  ಯಲ್ಲಾಪುರ, ಮುಂಡಗೋಡ,ಜೊಯಿಡಾ,ಅಂಕೋಲಾ ತಾಲೂಕುಗಳ ಸುಮಾರು 20 ಕ್ಕೂ ಹೆಚ್ಚು ಸಹಕಾರಿ ಸಂಘಗಳು ನಮ್ಮಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಬರುವ ದಿನಗಳಲ್ಲಿ ಜೊಯಿಡಾದಲ್ಲಿ ಅಡಿಕೆ ವ್ಯಾಪಾರಿ ಕೇಂದ್ರ ಆರಂಭಿಸಲು ನಿರ್ಧರಿಸಲಾಗಿದೆ. ಸೆ.18 ರಂದು ಮಧ್ಯಾಹ್ನ 3 ಕ್ಕೆ ಕಳಚೆಯ ಪ್ರಧಾನ ಕಚೇರಿಯಲ್ಲಿ ವಾರ್ಷಿಕ ಸರ್ವಸಾಧಾರಣ ಸಭೆ ನಡೆಯಲಿದೆ ಎಂದರು.
    ಸಂಘವು ಮೂರು ಶಾಖೆಗಳನ್ನು ಹೊಂದಿದ್ದು, 2025 ಸದಸ್ಯರಿದ್ದಾರೆ. ಅಡಿಟ್ ವರ್ಗಿಕರಣದಲ್ಲಿ ಬ ವರ್ಗದಲ್ಲಿ ಮುಂದುವರಿದಿದೆ. ಶೇರು ಬಂಡವಾಳ 2.04 ಕೋಟಿ,  ಕಾಯ್ದಿಟ್ಟ ನಿಧಿ‍ 1.72 ಕೋಟಿ, ಠೇವು 64.97 ಕೋಟಿ, ದುಡಿಯುವ ಬಂಡವಾಳ 73.41 ಕೋಟಿ, ಸಾಲ ವಸೂಲಾತಿ ಪ್ರಮಾಣ ಶೇ 89.67 ರಷ್ಟಾಗಿದೆ ಎಂದರು.
   ಉಪಾಧ್ಯಕ್ಷ ರಾಘವೇಂದ್ರ ಕೋಣೆಮನೆ, ನಿರ್ದೇಶಕರಾದ ಶ್ರೀಕಾಂತ ಹೆಬ್ಬಾರ, ರಾಮಕೃಷ್ಣ ಹೆಗಡೆ, ಗಜಾನನ ಭಟ್, ರಾಘವೇಂದ್ರ ಸೂತ್ರೆಮನೆ, ಶ್ರೀನಾಥ ಹೆಗಡೆ, ಪ್ರೇಮಾ ಹೆಗಡೆ, ಮುಖ್ಯ ಕಾರ್ಯನಿರ್ವಾಹಕ ದತ್ತಾತ್ರೇಯ ಹೆಗಡೆ, ಶಾಖಾ ವ್ಯವಸ್ಥಾಪಕರಾದ ಪರಶುರಾಮ ಮರಾಠೆ, ಅನಂತ ಹೆಗಡೆ ಇತರರಿದ್ದರು.
  • Related Posts

    ನಕಲಿ ಮತಗಳ ರಕ್ಷಣೆಗಾಗಿ ಡಿಕೆಶಿ ಹೈಡ್ರಾಮಾ: ಬೊಮ್ಮಾಯಿ

    Share this… Facebook Pinterest Twitter Linkedin Whatsappಎಸ್‌ಐಆರ್‌ ಬಗ್ಗೆ ಕಾಂಗ್ರೆಸ್‌ಗೆ ಈಗ ತೊಂದರೆಯಾಗಿದೆ: ಬಸವರಾಜ ಬೊಮ್ಮಾಯಿ ಹಾವೇರಿ: ರಾಜ್ಯದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಎಸ್‌ಐಆರ್‌ (Special Intensive Revision) ಪ್ರಕ್ರಿಯೆ ಸರಳವಾಗಿ ನಡೆಯುತ್ತಿದೆ ಎಂದು ಸಂಸದ ಹಾಗೂ ಮಾಜಿ…

    ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

    Share this… Facebook Pinterest Twitter Linkedin Whatsappಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ…

    You cannot copy content of this page