6

ಚಂದಗುಳಿಯಲ್ಲಿ ತೇಲಂಗಾರ ಮೈತ್ರಿ ಮಹಿಳಾ ತಾಳಮದ್ದಲೆ‌ ಬಳಗದಿಂದ ‘ಭೀಷ್ಮ ವಿಜಯ’

ಯಲ್ಲಾಪುರ ತಾಲೂಕಿನ ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಶ್ರೀ ಪ್ರಣವಾನಂದ ತೀರ್ಥ ಸ್ವಾಮಿಗಳ ಸಮ್ಮುಖದಲ್ಲಿ ತೇಲಂಗಾರಿನ ಮೈತ್ರಿ ಮಹಿಳಾ ತಾಳಮದ್ದಲೆ ಬಳಗದವರು ಭೀಷ್ಮ ವಿಜಯ ತಾಳಮದ್ದಲೆ ಪ್ರಸ್ತುತಪಡಿಸಿದರು.

ಭಾಗವತರಾಗಿ ಮಹಾಬಲೇಶ್ವರ ಭಟ್ಟ ಬೆಳಶೇರು, ಮದ್ದಲೆವಾದಕರಾಗಿ ನಾಗಪ್ಪ ಕೋಮಾರ ಹಿಮ್ಮೇಳದಲ್ಲಿ ಭಾಗವಹಿಸಿದ್ದರು.

ಭೀಷ್ಮನಾಗಿ ಶಾರದಾ ಗಾಂವ್ಕರ ಬೆಟ್ನೆಮನೆ, ಅಂಬೆಯಾಗಿ ಲಕ್ಷ್ಮೀ ಗಾಂವ್ಕರ ಸಾಂಬೆಮನೆ, ಬ್ರಾಹ್ಮಣನಾಗಿ ಶಾರದಾ ಗಾಂವ್ಕರ ಸಾಂಬೆಮನೆ, ಸಾಲ್ವನಾಗಿ ನಿರ್ಮಲಾ ಭಾಗ್ವತ ತೇಲಂಗಾರ, ಶೈಖ್ಯಾವತ್ಯನಾಗಿ ಸುಶೀಲಾ ಗಾಂವ್ಕರ ಬಾಳಂತಪಾಲ, ಅಕೃತವರ್ಣನಾಗಿ ನಳಿನಿ ಭಟ್ಟ ದೇವಸ, ಪರಶುರಾಮನಾಗಿ ಮಹಾಲಕ್ಷ್ಮೀ ಗಾಂವ್ಕರ ಸಾಂಬೆಮನೆ ಪಾತ್ರ ನಿರ್ವಹಿಸಿದರು.

ನರಸಿಂಹ ಭಟ್ಟ ಕುಂಕಿಮನೆ ಅವರ ನಿರ್ದೇಶನದಲ್ಲಿ ಎಲ್ಲ ಅರ್ಥಧಾರಿಗಳು ಅಚ್ಚುಕಟ್ಟಾಗಿ ಪಾತ್ರ ನಿರ್ವಹಿಸಿದರು. ಕಲಾವಿದರಿಗೆ ಶ್ರೀಗಳು ಪ್ರಸಾದ,ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page