ರಸ್ತೆಯ ಮೇಲೆ ಯಾವುದೇ ಸೂಚನೆ ಇಲ್ಲದೇ ನಿಲ್ಲಿಸಿದ್ದ ಲಾರಿಗೆ ಹಿಂಬದಿಯಿಂದ ಬೈಕ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಯಲ್ಲಾಪುರ ತಾಲೂಕಿನ ಹದ್ದಿನಸರದ ಬಳಿ ನಡೆದಿದೆ.
ಮೃತ ಸವಾರ ಧಾರವಾಡ ಜಿಲ್ಲೆಯ ಕಲಘಟಗಿ ಜುಂಜನಬೈಲಿನ ಲಕ್ಷ್ಮಣ ತಿಪ್ಪಯ್ಯ ಚ್ಯಾಂಗೋಜಿ (44).
ಹದ್ದಿನಸರದ ಬಳಿ ಯಾವುದೇ ಪಾರ್ಕಿಂಗ್ ಲೈಟ್ ಹಾಕದೇ ರಸ್ತೆಯ ಮೇಲೆ ಲಾರಿ ನಿಲ್ಲಿಸಲಾಗಿತ್ತು. ಸವಾರನ ನಿಯಂತ್ರಣ ತಪ್ಪಿ ಬೈಕ್ ಡಿಕ್ಕಿ ಹೊಡೆದಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬೈಕ್ ಜಖಂಗೊಂಡಿದೆ.
ಲಾರಿ ಚಾಲಕ ಹೊಸಳ್ಳಿಯ ಸಂತೋಷ ಲಕ್ಷ್ಮಣ ಹರಿಜನ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







