6

ಮಾತು ಉಳಿಸಿಕೊಂಡ ಮೋದಿ: ರಾಮು ನಾಯ್ಕ ಸಂತಸ

ದೇಶದ ತೆರಿಗೆ ವ್ಯವಸ್ಥೆಯನ್ನು ಇನ್ನಷ್ಟು ಸರಳ ಮಾಡುತ್ತೇನೆ. ಅಗತ್ಯ ವಸ್ತುಗಳ ಮೇಲಿನ ಜಿ.ಎಸ್.ಟಿ. ಕಡಿಮೆ ಮಾಡಿ ದೇಶದ ಜನರಿಗೆ ಭರ್ಜರಿ ದೀಪಾವಳಿ ಕೊಡುಗೆ ನೀಡುತ್ತೇನೆಂದು ಭರವಸೆ ನೀಡಿದ್ದ ಪ್ರಧಾನಿ ಮೋದಿ ತಮ್ಮ ಮಾತು ಉಳಿಸಿಕೊಂಡಿದ್ದಾರೆ ಎಂದು ಬಿಜೆಪಿ ಹಿರಿಯ ಮುಖಂಡ ರಾಮು ನಾಯ್ಕ ಸಂತಸ ವ್ಯಕ್ತಪಡಿಸಿದ್ದಾರೆ.

ದೇಶದ ಬಡಜನರು, ರೈತರು ಬಳಸುವ ಅನೇಕ ವಿಧದ ನಿತ್ಯೋಪಯೋಗಿ, ಜೀವನಾವಶ್ಯಕ ವಸ್ತುಗಳ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ತಮ್ಮ ಮಾತುಗಳನ್ನು ಉಳಿಸಿಕೊಂಡಿದ್ದಾರೆ. ಕೇಶತೈಲ, ಸಾಬೂನು, ಶಾಂಪು, ಶೇವಿಂಗ ಕ್ರೀಮ್, ಟೂಥ ಬ್ರಷ್, ಪೇಸ್ಟ್, ಸೈಕಲ್, ಮನೆ ಬಳಕೆ ಉಪಕರಣಗಳು, ಪಾದರಕ್ಷೆ, ಬೆಣ್ಣೆ, ತುಪ್ಪ, ಮಕ್ಕಳಿಗೆ ಹಾಲು ಕುಡಿಸುವ ಬಾಟಲಿಗಳು, ಬೇಬಿ ನ್ಯಾಪಕಿನ್, ಡೈಪರಗಳು, ಹೊಲಿಗೆಯಂತ್ರ, ಟ್ರ್ಯಾಕ್ಟರ್, ಅವುಗಳ ಟೈಯರ್, ಬಿಡಿ ಭಾಗಗಳು, ಹನಿ ನೀರಾವರಿಗೆ ಬಳಸುವ ವಸ್ತುಗಳು, ಕ್ರಷಿ ಹಾಗೂ ತೋಟಗಾರಿಕೆಯಲ್ಲಿ ಬಳಸುವ ಉಪಕರಣಗಳು, ಇತ್ಯಾದಿ ವಸ್ತುಗಳ ಮೇಲೆ ಇಲ್ಲಿಯವರೆಗೆ ಶೇಕಡಾ 12 ರಿಂದ18 ವರೆಗೆ ತೆರಿಗೆ ವಿಧಿಸಲಾಗುತ್ತಿತ್ತು. ಅದನ್ನು ಸಾಮೂಹಿಕವಾಗಿ ಅತ್ಯಂತ ಕನಿಷ್ಠ, ಶೇಕಡಾ 5 ಕ್ಕೆ ಇಳಿಸಲಾಗಿದೆ.

ಅಲ್ಟ್ರಾ ಹೈ ಟೆಂಪರೇಚರ್ ಹಾಲು, ಪನ್ನೀರ, ರೊಟ್ಟಿ, ಪರೋಟಾ, 33 ರೀತಿಯ ಜೀವರಕ್ಷಕ ಔಷದಿಗಳು, ಕ್ಯಾನ್ಸರ್ ನಿವಾರಕ ಔಷದಿಗಳು, ಅಪರೂಪದ ಕಾಯಿಲೆಗಳಿಗೆ ಬಳಸುವ ಔಷದಿಗಳು, ವಯಕ್ತಿಕ ಜೀವವಿಮೆ, ಆರೋಗ್ಯ ಪಾಲಿಸಿಗಳು, ವಿದ್ಯಾರ್ಥಿಗಳು ಬಳಸುವ ನಕಾಶೆ, ಚಾರ್ಟ್ಸ, ಜಾಮಿಟ್ರಿ ಉಪಕರಣಗಳು, ಪೆನ್ಸಿಲ್ಸ್, ಶಾರ್ಪನರ್ಸ್, ಬಳಪ, ಖಡು, ಪಠ್ಯ ಪುಸ್ತಕ, ನೋಟಬುಕ್ ಇವುಗಳಿಗೆ ಇನ್ನು ಮುಂದೆ ತೆರಿಗೆಯೇ ಇರುವದಿಲ್ಲ, ಜಿ.ಎಸ್.ಟಿ ಸಂಪೂರ್ಣ ಮನ್ನಾ ಮಾಡಲಾಗಿದೆ.

ಏರ್ ಕೂಲರ್, ಟೀವಿ, ವಾಷಿಂಗ್ ಮಷಿನ್, ಸಣ್ಣ ಕಾರುಗಳು, ಬೈಕುಗಳು, ಬಸ್, ಟ್ರಕ್‌, ಅಂಬುಲೆನ್ಸ್, ಎಲ್ಲ ರೀತಿಯ ಅಟೋ ಬಿಡಿಭಾಗಗಳು, ತ್ರಿಚಕ್ರ ವಾಹನ, ಸಿಮೆಂಟ್ ಇತ್ಯಾದಿ ವಸ್ತುಗಳ ಮೇಲೆ ಇಲ್ಲಿಯವರೆಗೆ ವಿಧಿಸಲಾಗುತ್ತಿದ್ದ ಸುಂಕದ ಪ್ರಮಾಣವನ್ನು ಶೇಕಡಾ 28 ರಿಂದ 18 ಕ್ಕೆ ಇಳಿಸಲಾಗಿದೆ.

ಭಾರತದ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಹಬ್ಬದ ಬಂಪರ್ ಗಿಫ್ಟ್ ನೀಡಿದ ಕೇಂದ್ರದ ಮೋದಿ ಆಡಳಿತಕ್ಕೆ ರಾಮು ನಾಯ್ಕ ಅಭಿನಂದನೆ ಸಲ್ಲಿಸಿದ್ದಾರೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page