ಯಲ್ಲಾಪುರ ತಾಲೂಕಿನ ಜಂಬೆಸಾಲ ಅಂಗನವಾಡಿಯಲ್ಲಿ ಶುಕ್ರವಾರ ಪೋಷಣಾ ಅಭಿಯಾನ ನಡೆಯಿತು.
ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಲಕ್ಷ್ಮೀ ಬೋವಿವಡ್ಡರ್, ದತ್ತಾತ್ರಯ ಗೋಪಾಲ ಹೆಗಡೆ, ಮಂಜುನಾಥ ಹೆಗಡೆ, ಅಂಗನವಾಡಿ ನೌಕರರ ಸಂಘದ ತಾಲೂಕಾ ಅಧ್ಯಕ್ಷೆ ಲಲತಾ ಹೆಗಡೆ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ತಾಯಿಯ ಹೆಸರಲ್ಲಿ ಗಿಡ ನೆಡಲಾಯಿತು. ಮಕ್ಕಳಿಗೆ ಗರ್ಭಿಣಿ, ಬಾಣಂತಿಯರಿಗೆ ಪೋಷಣಾ ಅಭಿಯಾನದ ಮಹತ್ವ ವಿವರಿಸಲಾಯಿತು.







