ಯಲ್ಲಾಪುರದ ಸರ್ಕಾರಿ ನೌಕರರ ಭವನದ ನೂತನ ಕಟ್ಟಡದ ಭೂಮಿಪೂಜೆಯನ್ನು ಸಾಂಕೇತಿಕವಾಗಿ ಗುರುವಾರ ನೆರವೇರಿಸಲಾಯಿತು.
ಭೂಮಿಪೂಜೆ ನೆರವೇರಿಸಿ ಮಾತನಾಡಿದ ತಾಲೂಕಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ, ಸಂಘದ ಬಹುದಿನದ ಕನಸಾದ ನೂತನ ಕಟ್ಟಡ ಕಾಮಗಾರಿಯನ್ನು 6 ತಿಂಗಳೊಳಗೆ ಪೂರೈಸುವ ಉದ್ದೇಶ ಹೊಂದಿದ್ದೇವೆ. ನೂತನ ಕಟ್ಟಡ ಅಂಗಡಿ ಸಂಕೀರ್ಣ ಹಾಗೂ ಸಭಾಭವನವನ್ನು ಒಳಗೊಂಡಿರುತ್ತದೆ. ಮೊದಲ ಹಂತದಲ್ಲಿ 1.59 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲಾಗುತ್ತದೆ ಎಂದರು.
ಅರ್ಚಕ ನಾಗೇಂದ್ರ ಭಟ್ಟ ಪೂಜೆ ನೆರವೇರಿಸಿದರು. ಸಂಘದ ಗೌರವಾಧ್ಯಕ್ಷ ಸುಭಾಶ ನಾಯಕ, ಹಿರಿಯ ಉಪಾಧ್ಯಕ್ಷ ನಾರಾಯಣ ನಾಯಕ, ಕಾರ್ಯದರ್ಶಿ ಶರಣಪ್ಪ ಗೊಜನೂರು, ಖಜಾಂಚಿ ವಿಶಾಲ ನಾಯಕ, ಜಂಟಿ ಕಾರ್ಯದರ್ಶಿಗಳಾದ ವೆಂಕಟರಮಣ ಭಟ್ಟ, ಮಹೇಶ ತಾಳಿಕೋಟಿ, ಆಂತರಿಕ ಲೆಕ್ಕ ಪರಿಶೋಧಕಿ ವೀರವ್ವ ಪೂಜಾರಿ, ನಿರ್ದೇಶಕರಾದ ಅಜಿತ ನಾಯಕ, ದಿನೇಶ ಭಟ್ಟ, ಜಿ.ಸಂತೋಷ, ಸರ್ಕಾರಿ ನೌಕರರಾದ ವಿನಾಯಕ ಗಾಂವ್ಕರ, ಅಮಿತ್ ಚೌಹಾಣ, ಹಾಗೂ ಸಂಘದ ಸದಸ್ಯರು ಭಾಗವಹಿಸಿದ್ದರು.







