6
September 29, 2026

ಬಿಲ್ಲಿಗದ್ದೆಯಲ್ಲಿ ಸಂಭ್ರಮದ ಶಾರದಾ ಉತ್ಸವ

ಯಲ್ಲಾಪುರ ತಾಲೂಕಿನ ಬಿಲ್ಲಿಗದ್ದೆಯಲ್ಲಿ ಮೂರನೇ ವರ್ಷದ ಶಾರದಾ ಉತ್ಸವ ವಿಜೃಂಭಣೆಯಿಂದ ನಡೆಯಿತು.

‌ ಸಮಾರೋಪ ಸಮಾರಂಭದಲ್ಲಿ ಹಿರಿಯರಾದ ಎಲ್.ಪಿ.ಭಟ್ಟ ಗುಂಡ್ಕಲ್ ಅಧ್ಯಕ್ಷತೆ ವಹಿಸಿದ್ದರು. ಅಂಗವೈಕಲ್ಯದ ನಡುವೆಯೂ ಉತ್ಸವದಲ್ಲಿ ತಮ್ಮ ತಂಡದೊಂದಿಗೆ ಬಂದು ಭಜನಾ ಸೇವೆ ನಡೆಸುತ್ತಿರುವ ವಿಠ್ಠಲ ನಾಯ್ಕ ಹೊಳೆಮಡು ಅವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಎಲ್.ಎಸ್.ಎಂ.ಪಿ ಸೊಸೈಟಿ ಅಧ್ಯಕ್ಷ ನಾಗರಾಜ ಕವಡಿಕೆರೆ, ಚಂದಗುಳಿ ಗ್ರಾ.ಪಂ ಸದಸ್ಯ ಸುಬ್ಬಣ್ಣ ಉದ್ದಾಬೈಲ, ಎಲ್.ಎಸ್.ಎಂ.ಪಿ ನಿರ್ದೇಶಕ ಎಂ.ಎನ್.ಭಟ್ಟ, ಶಾರದಾ ಮಹೋತ್ಸವ ಸಮಿತಿಯ ಮಂಜುನಾಥ, ಅಭಿಷೇಕ, ಮೋಹನ ಹಾಗೂ ಸಮಿತಿಯ ಪ್ರಮುಖರು ಉಪಸ್ಥಿತರಿದ್ದರು.

ನಾಲ್ಕು ದಿವಸಗಳ‌ ಉತ್ಸವದಲ್ಲಿ ಸಂಗೀತ ಕಾರ್ಯಕ್ರಮ, ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಭಜನೆ, ರಂಗೋಲಿ ಸ್ಪರ್ಧೆ, ತಾಳಮದ್ದಲೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆದವು.

You cannot copy content of this page