ಯಲ್ಲಾಪುರದ ಐಬಿ ರಸ್ತೆಯ ಪಕ್ಕದಲ್ಲಿರುವ ಅಂಗಡಿ ಹಾಗೂ ಸಮೀಪದ ಗೋಡೌನಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ಹಾನಿ ಉಂಟಾಗಿದೆ.
ಕಾಯಿ, ಹಣ್ಣು ವ್ಯಾಪಾರ, ಖರೀದಿ ಮಾಡುವ ಶಿವಾನಂದ ಮರಾಠಿ ದೊಡ್ಡಬೇಣ ಅವರಿಗೆ ಸೇರಿದ ಈ ಅಂಗಡಿಯೊಳಗೆ ಶನಿವಾರ ನಸುಕಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಉಂಟಾಗಿ ಬೆಂಕಿ ತಗುಲಿದೆ.
ಇದರಿಂದ ಗೋಡೌನಿನಲ್ಲಿದ್ದ 10 ಸಾವಿರ ಅಡಕೆ ಹಾಳೆಯ ಪ್ಲೇಟ್ ಗಳು, 80 ಲೀಟರ್ ಜೇನುತುಪ್ಪ, ಗ್ಲಾಸ್, ಬೌಲ್, ಚಮಚ, ಅಗರಬತ್ತಿ, 6 ಕ್ವಿಂಟಲ್ ಬಾಳೆಕಾಯಿ, 1 ಟನ್ ಬರಡು ಕಾಯಿ ಸೇರಿದಂತೆ ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.
ಅಗ್ನಿಶಾಮಕ ದಳದ ಎಫ್.ಎಸ್.ಒ ಶಂಕರಪ್ಪ ಅಂಗಡಿ, ಸಿಬ್ಬಂದಿಗಳಾದ ಪ್ರಣಯ ಕೊಚ್ರೆಕರ್, ನಾಗರಾಜ ನಾಯಕ, ಅಮಿತ್ ಗುನಗಿ, ಸಲೀಂ ನದಾಫ, ಶಿವಾನಂದ ಕೋಡಿ ಸ್ಥಳಕ್ಕೇ ಆಗಮಿಸಿ, ಬೆಂಕಿ ನಂದಿಸಿದರು.







