6

ಕಿರವತ್ತಿಯಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಸಂಭ್ರಮದ ರಾಜ್ಯೋತ್ಸವ

ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

ಕಿರವತ್ತಿಯ ಪ್ರಮುಖ ಬೀದಿಗಳಲ್ಲಿ ಕನ್ನಡಾಂಬೆ ಭುವನೇಶ್ವರಿಯ ಭಾವಚಿತ್ರದ ಮೆರವಣಿಗೆ ನಡೆಯಿತು. ಮಹಿಳೆಯರ ಅಬ್ಬರದ ಡೊಳ್ಳು ಕುಣಿತ ಗಮನ ಸೆಳೆಯಿತು. ಕನ್ನಡ ಪರ ಘೋಷಣೆ,ಬಾವುಟ,ಕನ್ನಡ ಹಾಡಿಗೆ ಕುಣಿತ ಆಕರ್ಷಕ ಸ್ಥಬ್ದಚಿತ್ರದೊಂದಿಗೆ ಸುಮಾರು ಎರಡು ಗಂಟೆಗಳ ಕಾಲ ಅದ್ದೂರಿಯಾಗಿ ಮೆರವಣಿಗೆ ನಡೆಯಿತು.

ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಜಯ ಕರ್ನಾಟಕ ಸಂಘಟನೆಯ ಹುಬ್ಬಳ್ಳಿಯ ಘಟಕದ ಅಧ್ಯಕ್ಷ ಸದ್ದಾಂ ನದಾಫ ಮಾತನಾಡಿ, ಎಲ್ಲಾ ಕನ್ನಡ ಮನಸ್ಸುಗಳೂ ಒಂದಾಗಿ ನಾಡು ನುಡಿ ಏಳಿಗೆಗೆ ಶ್ರಮಿಸಬೇಕು ಎಂದು ಹೇಳಿದರು.

ಫಾ. ರೇಮಂಡ್ ಫರ್ನಾಂಡೀಸ್ ಮಾತನಾಡಿ, ಜಾತಿ, ಧರ್ಮ ಬದಿಗಿಟ್ಟು ಭಾಷೆಯ ಮೂಲಕ ಸಮಾಜವನ್ನು ಜೋಡಿಸುವ, ಕೂಡಿಸುವ ಕೆಲಸ ಮಾಡಬೇಕು. ಕನ್ನಡ ಉಳಿಸಲು ಕನ್ನಡದಲ್ಲಿಯೇ ವ್ಯವಹರಿಸಬೇಕು ಎಂದರು.
ಸಾಮಾಜಿಕ ಕಾರ್ಯಕರ್ತೆ ಸೀಮಾ ಫರ್ನಾಂಡೀಸ್ ಮಾತನಾಡಿ, ಕಳೆದ 15 ವರ್ಷದಿಂದ ಸಂಘಟನೆ ಕನ್ನಡದ ಕೆಲಸಕ್ಕಾಗಿ ಹೋರಾಡುತ್ತ ಬಂದಿರುವುದು ಅಭಿಮಾನದ ಸಂಗತಿ ಎಂದರು.

ಪ್ರಮುಖರಾದ ನೂರ್ ಅಹಮ್ಮದ್ ಶೇಖ್, ಜೂಜೆ ಸಿದ್ದಿ‌ ಮುಂಡಗೋಡ ಮಾತನಾಡಿದರು.
ಸಂಘಟನೆಯ ಪ್ರಮುಖರಾದ ಮಂಜುನಾಥ ಬಾರಕರ್
ರಾಜಶೇಖರ ವಂದಲಿ, ಎಸ್ ಫಕೀರಪ್ಪ, ದೀಪಕ ಮಿರಾಶಿ, ಮುನಾಫ ಪಟೇಲ್, ಶಂಶಾದ್ ಅತ್ತರ್, ತೇರೆಜಾ ಫರ್ನಾಂಡೀಸ್, ಕಲ್ಪನಾ ಪಾಟೀಲ್, ಅರ್ಜುನ ಬೆಂಗೇರಿ, ಮಾಯಾ ಪಾಟೀಲ್, ಮಹೇಶ ನಾಯ್ಕ, ಹರೂಣ ಪಟೇಲ್, ಜಾಫರ್ ವಂಟಿ, ಚನ್ನಪ್ಪ ಡಿ ಎಸ್, ಫಾತೀಮಾ, ಗಾಂಧಿ ಸೋಮಾಪುರಕರ್, ಬಮ್ಮು ಪಾಟೀಲ್, ಪರಶುರಾಮ, ಜಾನು ಪಟಕಾರೆ,ಗಂಗವ್ವ ಇತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿಯಲ್ಲಿ ಹೆಚ್ಚಿನ ಅಂಕ ಪಡೆದ ಅಕ್ಷತಾ ಧೂಳಿಕೊಪ್ಪ ಅವರನ್ನು ಪುರಸ್ಕಾರಿಸಲಾಯಿತು. ರಾಜ್ಯಮಟ್ಟದ ಕಬ್ಬಡ್ಡಿ ಸ್ಪರ್ಧೆಗೆಗೆ ಆಯ್ಕೆಯಾದ ಕಿರವತ್ತಿಯ ರೋಷನ್ ಕಿತ್ತೂರ ತಂಡವನ್ನು ಗೌರವಿಸಲಾಯಿತು.

ಸುಮಂಗಲಾ‌ ಹನುಮರೆಡ್ಡಿ ಸಂಗಡಿಗರು ಪ್ರಾರ್ಥಿಸಿದರು.
ಸಂಘಟನೆ ತಾಲೂಕಾಧ್ಯಕ್ಷ ವಿಲ್ಸನ್ ಫರ್ನಾಂಡೀಸ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಗಂಗಾಧರ ಎಸ್ ಎಲ್ ನಿರೂಪಿಸಿದರು.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page