6

ಅಡಿಕೆ ಕಳ್ಳರ ವಿರುದ್ಧ ದೇವಸ್ಥಾನದ ಹುಂಡಿ ಹಣ ಕದ್ದ ಆರೋಪ

ಯಲ್ಲಾಪುರ ತಾಲೂಕಿನ ಹಾಸಣಗಿ ಬೆಂಡಿಗೇರಿಯ ಶ್ರೀ ದ್ಯಾಮವ್ವ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳ್ಳತನವಾದ ಕುರಿತು ಒಂದು ವಾರದ ನಂತರ ಪ್ರಕರಣ ದಾಖಲಾಗಿದೆ.

ಕಳೆದ ಅಕ್ಟೋಬರ್ 31 ರಂದು ದ್ಯಾಮವ್ವ ದೇವಸ್ಥಾನದ ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಎರಡು ಕಾಣಿಕೆ ಹುಂಡಿಗಳಲ್ಲಿದ್ದ ಸುಮಾರು 14 ಸಾವಿರ ರೂಗಳನ್ನು ಕದ್ದೊಯ್ದಿದ್ದಾರೆ.

ಈಗಾಗಲೇ ಅಡಕೆ ಕಳ್ಳತನ ಮಾಡಿ ಪೊಲೀಸರ ವಶದಲ್ಲಿರುವ ಬೆಂಡಿಗೇರಿಯ ಹರುಷ ಈರಪ್ಪ ಬೋವಿವಡ್ಡರ್ ಹಾಗೂ ಗೌಡಳ್ಳಿಯ ಭಾಸ್ಕರ ಕೃಷ್ಣ ಬೋವಿವಡ್ಡರ್ ಇವರ ಮೇಲೆ ಸಂಶಯವಿದ್ದು, ಸರಿಯಾಗಿ ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ದೇವಸ್ಥಾನದ ಸಮಿತಿಯ ವಿನೋದ ಸುರೇಶ ತಳೇಕರ್ ದೂರು ನೀಡಿದ್ದಾರೆ. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • Related Posts

    ಹಾವೇರಿಯಲ್ಲಿ 10.7 ಕೆಜಿ ಗಾಂಜಾ ಜಪ್ತಿ..! 5 ಮಂದಿ ಅರೆಸ್ಟ್

    Share this… Facebook Pinterest Twitter Linkedin Whatsappಹಾವೇರಿಯಲ್ಲಿ 10.765 ಕೆಜಿ ಗಾಂಜಾ ಜಪ್ತಿ: 5 ಆರೋಪಿತರ ಬಂಧನ ಹಾವೇರಿ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಐವರು ಹಾಗೂ ಓರ್ವ ಕಾನೂನು ಸಂಘರ್ಷಕ್ಕೊಳಗಾದ ಬಾಲಕನನ್ನು ಹಾವೇರಿ ಶಹರ ಪೊಲೀಸರು ವಶಕ್ಕೆ…

    ಹಾವೇರಿ ಜನರೇ..3 ದಿನ ಮಾತ್ರ ಅವಕಾಶ… ಮಿಸ್ ಮಾಡಿಕೊಳ್ಳಬೇಡಿ!

    Share this… Facebook Pinterest Twitter Linkedin Whatsappಹಾವೇರಿ: ದಸರಾ ಹಾಗೂ ದೀಪಾವಳಿ ಹಬ್ಬದ ಪ್ರಯುಕ್ತ ಹಾವೇರಿಯಲ್ಲಿ ನ್ಯಾಷನಲ್ ಹಾಗೂ ಇಂಟರ್‌ನ್ಯಾಷನಲ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್‌ಗಳ ಬಿಗ್ ಡಿಸ್ಕೌಂಟ್ ಸೇಲ್ ಆರಂಭವಾಗಿದೆ. ಹಬ್ಬದ ಸಂಭ್ರಮದ ಜೊತೆಗೆ ಕುಟುಂಬದ ಎಲ್ಲರಿಗೂ ಹೊಸ ಬಟ್ಟೆ…

    You cannot copy content of this page