6 Skip to content

ಕೊರಿಯರ್ ಲಾರಿ ಪಲ್ಟಿ: ಚಾಲಕನಿಗೆ ಗಾಯ

ಕೊರಿಯರ್ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ ಮೇಲೆ ಯಲ್ಲಾಪುರ ತಾಲೂಕಿನ ಅರಬೈಲ್ ಮಾರ್ಕೆಯಮ್ಮಾ ದೇವಸ್ಥಾನದ ಬಳಿ ನಡೆದಿದೆ.

ಅಂಕೋಲಾದಲ್ಲಿ ಕೊರಿಯರ್ ತುಂಬಿಕೊಂಡು ಯಲ್ಲಾಪುರ ಕಡೆಗೆ ಬರುತ್ತಿದ್ದ ವಿ.ಆರ್.ಎಲ್. ಲಾರಿ, ಅರಬೈಲ್ ಮಾರ್ಕೆಯಮ್ಮಾ ದೇವಸ್ಥಾನದ ಬಳಿ ಬರುವಾಗ ರಸ್ತೆ ಪಕ್ಕ ಪಲ್ಟಿಯಾಗಿದೆ.

ಚಾಲಕ ಧಾರವಾಡ ಜಿಲ್ಲೆಯ ಕಲಘಟಗಿ ದುಮ್ಮಾಡದ ಗಂಗಾಧರ ಬಸವರಾಜ ಬಂಡಿವಡ್ಡರ್ ಗಾಯಗೊಂಡಿದ್ದಾನೆ. ಲಾರಿ ಜಖಂಗೊಂಡಿದೆ. ಚಾಲಕನ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You cannot copy content of this page